ಬಿಬಿಎಂಪಿ ಮಾಜಿ ಸದಸ್ಯೆಯಿಂದ ಕೋಳಿ ವಿತರಣೆ; ಮುಗಿಬಿದ್ದು ಕೊಂಡೊಯ್ದ ಜನರು

koli
Published on

ಬೆಂಗಳೂರು: ಶಿವನಗರ ವಾರ್ಡ್​ನಲ್ಲಿ ಬಿಬಿಎಂಪಿ ಮಾಜಿ ಸದಸ್ಯೆ ಮಂಜುಳಾ ವಿಜಯಕುಮಾರ್ ಗುರುವಾರ ಬಡವರಿಗೆ ಫಾರಂ ಕೋಳಿ ಮತ್ತು 21 ಬಗೆಯ ತರಕಾರಿ ವಿತರಣೆ ಮಾಡಿದರು. ಈ ವೇಳೆ ಕೋಳಿ ಪಡೆಯಲು ಜನರು ಮುಗಿಬಿದ್ದಿದ್ದರು.

ಶ್ರೀಮಂತರಿಗೆ ಹಣ ಇರುತ್ತದೆ ಉತ್ತಮ ಆಹಾರ ಸೇವಿಸುತ್ತಾರೆ. ಅದರೆ ಬಡವರು ಲಾಕ್ ಡೌನ್ ಜಾರಿಯಿಂದ ಉದ್ಯೋಗವಿಲ್ಲದೆ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಕಷ್ಟಕರ ಸನ್ನಿವೇಶದಲ್ಲಿ ಅವರಿಗೂ ಮಾಂಸಹಾರ ಸೇವನೆ ಮಾಡಬೇಕು ಎಂದು ಆಸೆ ಇರುತ್ತದೆ. ಅದ್ದರಿಂದ, ಪ್ರತಿಯೊಬ್ಬರಿಗೂ ಒಂದು ಕೋಳಿ ಮತ್ತು ಪೌಷ್ಟಿಕಾಂಶ ತರಕಾರಿ ವಿತರಿಸಲಾಗಿದೆ ಎಂದು ಮಂಜುಳಾ ವಿಜಯಕುಮಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net