

ಬಂಟ್ವಾಳ: ಸೇವಾಂಜಲಿ ಸಂಸ್ಥೆಯ ಸೇವಾ ಕಾರ್ಯದ ಹಿಂದೆ ಉತ್ಕ ೃಷ್ಟವಾದ ದೃಷ್ಟಿಕೋನವಿದೆ. ಇಂತಹ ಪ್ರತಿಷ್ಠಾನಗಳಿಗೆ ಸಮಾಜ ಚಿರಋಣಿಯಾಗಿರಬೇಕು ಎಂದು ಮಂಗಳೂರು ಉತ್ತರ ಶಾಸಕ ಡಾ.ವೈ.ಭರತ್ ಶೆಟ್ಟಿ ಹೇಳಿದರು.
ಕೇಂದ್ರ ಸರ್ಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ವತಿಯಿಂದ ಸೇವಾಂಜಲಿ ಸಭಾಗೃಹದಲ್ಲಿ ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರದ ಕಿಟ್ ವಿತರಿಸಿ ಮಾತನಾಡಿದರು.
ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ವಸಂತ್ ಕುಮಾರ್ ಶೆಟ್ಟಿ ಶುಭಹಾರೈಸಿದರು. ಸಂತೋಷ್ ತುಪ್ಪೆಕಲ್ಲು, ಸೇವಾಂಜಲಿ ಟ್ರಸ್ಟಿ ನಾರಾಯಣ ಬಡ್ಡೂರು, ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಸಂಶೋಧನಾ ವಿದ್ಯಾರ್ಥಿಗಳಾದ ಡಾ.ಮಹಮ್ಮದ್ ಪಾಷ, ಡಾ.ಸಮೃರ್ಥ್, ಸುಜೀರು ಪ್ರತಾಪ್ ಆಳ್ವ, ಸಂದೀಪ್ ನೀರೊಲ್ಬೆ, ಪ್ರವೀಣ್ ಕಬೆಲ, ಪ್ರಶಾಂತ್ ತುಂಬೆ, ವಿಕ್ರಂ ಬರ್ಕೆ ಮೊದಲಾದವರಿದ್ದರು. ಸೇವಾಂಜಲಿ ಪ್ರತಿಷ್ಠಾನ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಪ್ರಸ್ತಾವಿಸಿದರು.