

ಮಡಿಕೇರಿ: ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕೊಡಗು ಜಿಲ್ಲಾ ಘಟಕದ ವತಿಯಿಂದ ಮಾದಾಪುರದ ಶ್ರೀಮತಿ ಡಿ.ಚೆನ್ನಮ್ಮ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ನೋಟ್‌ಬುಕ್, ಟಾರ್ಪಲ್, ಮಾಸ್ಕ್, ಕಿಟ್‌ಗಳನ್ನು ವಿತರಣೆ ಮಾಡಲಾಯಿತು.
ಸಂಸ್ಥೆಯ ಸಭಾಂಗಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಸಭಾಪತಿ ಬಿ.ಕೆ.ರವೀಂದ್ರ ರೈ, ಶಿಕ್ಷಣ ಸಂಸ್ಥೆಯ ಅಹ೯ ವಿದ್ಯಾರ್ಥಿಗಳಿಗೆ ಮಳೆಗಾದಲ್ಲಿ ಮನೆಗೆ ಹೊದಿಸಲು ಟಾಪ೯ಲ್, ಆಥಿ೯ಕ ಸಮಸ್ಯೆಯಲ್ಲಿರುವ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಪಾತ್ರೆ ಪರಿಕರಗಳ ಕಿಟ್ ವಿತರಿಸಿದರು. ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳಿಗೂ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಮಾಸ್ಕ್‌ಗಳನ್ನೂ ನೀಡಲಾಯಿತು.
ಈ ಸಂದರ್ಭ ಮಾತನಾಡಿದ ರವೀಂದ್ರರೈ, ರೆಡ್ ಕ್ರಾಸ್ ಸಂಸ್ಥೆಯು ಜಾಗತಿಕ ಸೇವಾ ಸಂಸ್ಥೆಯಾಗಿ ಮನ್ನಣೆ ಪಡೆದಿದೆ. ಸಮರ ಸಂದರ್ಭದಲ್ಲಿ ಯುದ್ಧ ನಿರತ ದೇಶಗಳ ಜನತೆಗೆ ಆರೋಗ್ಯ ನೆರವಿಗೆ ಮುಂದಾಗುವುದಲ್ಲದೇ ಉಭಯ ದೇಶಗಳ ನಡುವೆ ಶಾಂತಿ ಸ್ಥಾಪನೆಗೂ ಮುಂದಾಗುತ್ತದೆ. ರೆಡ್ ಕ್ರಾಸ್‌ಗೆ ಭಾರತದಲ್ಲಿ ೧೦೦ ವರ್ಷಗಳಿಗೂ ಮೀರಿದ ಇತಿಹಾಸವಿದೆ ಎಂದು ರೆಡ್ ಕ್ರಾಸ್ ಕಾಯ೯ಚಟುವಟಿಕೆಗಳ ಮಾಹಿತಿ ನೀಡಿದರು.
ಶಿಕ್ಷಣ ಸಂಸ್ಥೆಯಲ್ಲಿ ರೆಡ್ ಕ್ರಾಸ್‌ನ ವಿದ್ಯಾರ್ಥಿ ಘಟಕ ಪ್ರಾರಂಭಿಸುವ ನಿಟ್ಟಿನಲ್ಲಿ ಜೂನಿಯರ್ ರೆಡ್ ಕ್ರಾಸ್ ಜಿಲ್ಲಾ ನಿರ್ದೇಶಕ ಎಂ.ಧನಂಜಯ್ ಮಾಹಿತಿ ನೀಡಿದರು. ರೆಡ್ ಕ್ರಾಸ್ ಉಪಾಧ್ಯಕ್ಷ ಎಚ್.ಟಿ.ಅನಿಲ್, ನಿದೇ೯ಶಕ ಕೆ.ವಸಂತ್ ಕುಮಾರ್, ಶ್ರೀಮತಿ ಡಿ.ಚೆನ್ನಮ್ಮ ಪ.ಪೂ.ಕಾಲೇಜು ಪ್ರಾಂಶುಪಾಲ ಸಿ.ಮಂದಪ್ಪ, ಶಿಕ್ಷಕ ವಂದದವರು ಹಾಜರಿದ್ದರು.