ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣೆ

nrp 2 (2)
Published on

ಎನ್.ಆರ್.ಪುರ: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿದ್ದು, ಶಾಲೆ ಪ್ರಾರಂಭದಿಂದಲೇ ಶ್ರದ್ಧೆಯಿಂದ ಓದಿ ಉತ್ತಮ ಅಂಕ ಪಡೆಯಬೇಕು ಎಂದು ದಾನಿಗಳಾದ ಹರಿಹರಪುರ ಅಭಿನವ ರಮಾನಂದ ಸರಸ್ವತಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯ ಬೆಮ್ಮನೆ ದಯಾನಂದ್ ಹೇಳಿದರು. ಬೆಳ್ಳೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ 23 ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್ ಹಾಗೂ ಪೆನ್‌ಗಳನ್ನು ವಿತರಿಸಿ ಮಾತನಾಡಿದರು.

ಶಾಲೆ ಮುಖ್ಯಶಿಕ್ಷಕಿ ಸುಧಾ ಮಾತನಾಡಿ, ದಾನಿಗಳು ನೀಡಿದ ನೋಟ್ ಬುಕ್ ಗಳನ್ನು ವಿದ್ಯಾರ್ಥಿಗಳು ಸರಿಯಾದ ರೀತಿ ಉಪಯೋಗಿಸಿಕೊಳ್ಳಬೇಕು. ಮುಂದೆ ವಿದ್ಯಾರ್ಥಿಗಳು ಜೀವನದಲ್ಲಿ ದೊಡ್ಡ ಹುದ್ದೆಯಲ್ಲಿದ್ದಾಗ ಇದೇ ರೀತಿ ಮಕ್ಕಳಿಗೆ, ಶಾಲೆಗಳಿಗೆ ದಾನ ನೀಡಬೇಕು ಎಂದರು.

ಎಸ್‌ಡಿಎಂಸಿ ಸದಸ್ಯರಾದ ಎಚ್.ಇ.ಮಹೇಶ್, ಎಚ್.ಎಲ್.ಸದಾಶಿವ, ಸಹ ಶಿಕ್ಷಕ ಕೆ.ಆರ್.ದಯಾನಂದ, ಸಹ ಶಿಕ್ಷಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net