

ಚಿಕ್ಕಮಗಳೂರು: ನಗರದ ಹಿರೇಮಗಳೂರಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶನಿವಾರ ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ.ರವಿ ಜನ್ಮದಿನದ ಅಂಗವಾಗಿ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿ ಬಳಗದಿಂದ ಉಚಿತವಾಗಿ ನೋಟ್‌ಬುಕ್ ಹಾಗೂ ಲೇಖನಿಗಳನ್ನು ವಿತರಿಸಲಾಯಿತು.
ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಕಾರ್ಯದರ್ಶಿ ಸೀತರಾಮಭರಣ್ಯ, ಕಳೆದ ತಿಂಗಳು ಶಾಸಕರ ಜನ್ಮದಿನವನ್ನು ಆಚರಿಸಲಾಗಿತ್ತು. ಆ ಸಮಯದಲ್ಲಿ ವಿಪರೀತ ಮಳೆ ಹಾಗೂ ಶಾಲೆಗಳಿಗೆ ರಜೆ ಇದ್ದ ಕಾರಣ ಈಗ ಶಾಲೆಗೆ ತೆರಳಿ ನೋಟ್‌ಪುಸ್ತಕ ವಿತರಿಸಲಾಗಿದೆ ಎಂದರು.
ನೋಟ್‌ಪುಸ್ತಕ, ಲೇಖನಿಗಳನ್ನು ಪಡೆದ ಮಕ್ಕಳು ಜೋಪಾನವಾಗಿ ಇರಿಸಬೇಕು. ವರ್ಷಪೂರ್ತಿ ಸಮಗ್ರವಾಗಿ ಅಧ್ಯಯನ ನಡೆಸಿ ಶಾಲೆಗೆ ಹಾಗೂ ಪಾಲಕರಿಗೆ ಉತ್ತಮ ಹೆಸರು ತಂದರೆ ಮಾತ್ರ ನೋಟ್ ಪುಸ್ತಕ ನೀಡಿರುವುದು ಸಾರ್ಥಕವಾದಂತೆ ಎಂದು ತಿಳಿಸಿದರು.
ಬಾಲ್ಯದಿಂದಲೇ ಮಕ್ಕಳು ದೇಶಾಭಿಮಾನಿ ಬೆಳೆಸಿಕೊಳ್ಳಬೇಕು. ದೇಶಕ್ಕೆ ಮಡಿದ ಹೋರಾಟಗಾರರನ್ನು ನೆನೆಯಬೇಕು. ಸಮಾಜದಲ್ಲಿ ಪ್ರತಿದಿನವು ನೆಮ್ಮದಿ ಹಾಗೂ ಶಾಂತಿಯಿAದ ಜೀವನ ನಡೆಸಲು ಕಾರಣ ಸ್ವಾ ತಂತ್ರö್ಯ ಹೋರಾಟಗಾರರು ಹಾಗೂ ಸೈನಿಕರು. ಅವರನ್ನು ಎಂದಿಗೂ ಮರೆಯಕೂಡದು ಎಂದು ತಿಳಿಸಿದರು.
ಬಿಜೆಪಿ ಮಾಧ್ಯಮ ಪ್ರಮುಖ್ ಕೇಶವಮೂರ್ತಿ ಮಾತನಾಡಿ, ಹಿರೇಮಗಳೂರು ಗ್ರಾಮ ಅತ್ಯಂತ ಇತಿಹಾಸ ಪ್ರಸಿದ್ಧವಾದುದು. ಈ ಸರ್ಕಾರಿ ಶಾಲೆಯಲ್ಲಿ ಅನೇಕ ಮಂದಿ ವಿದ್ಯಾಭ್ಯಾಸ ನಡೆದವರು ಸಮಾಜದಲ್ಲಿ ಉನ್ನತ ಹುದ್ದೆ ಹಾಗೂ ಸ್ಥಾನಮಾನ ಹೊಂದಿರುವುದು ಶಾಲೆಗೆ ಹೆಮ್ಮೆ ತರುವ ಸಂಗತಿ ಎಂದು ಹೇಳಿದರು.
ಬ್ರಾಹ್ಮಣ ಮಹಾಸಭಾ ನಿರ್ದೇಶಕ ಉದಯಶಂಕರ್‌ಭಟ್ ಮಾತನಾಡಿ, ವಿದ್ಯಾರ್ಥಿಗಳಿಗೆ ಆರಂಭದಲ್ಲೇ ಶಿಕ್ಷಕರು ಹಾಗೂ ಪಾಲಕರು ಉತ್ತಮ ಸಂಸ್ಕಾರ ಹಾಗೂ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸಿದರೆ ಮಾತ್ರ ಭವಿಷ್ಯದಲ್ಲಿ ಮಕ್ಕಳು ಸತ್ಪçಜೆಗಳಾಗಿ ರೂಪುಗೊಳ್ಳಲು ಸಾಧ್ಯ ಎಂದು ತಿಳಿಸಿದರು.
ಇದೇ ವೇಳೆ ಶಾಲಾ ಆವರಣದಲ್ಲಿ ಸಸಿ ನಡೆಲಾಯಿತು. ನಂತರ ಶಾಲೆಯ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಹಳೇ ವಿದ್ಯಾರ್ಥಿಗಳಾದ ಎಂ.ಎಸ್.ನಾಗರಾಜ್ ೫ ಸಾವಿರ ಧನಸಹಾಯ ಹಾಗೂ ಎಲ್.ಜೆ. ಮೋಹನ್ ೧೦ ಚೀಲ ಸಿಮೆಂಟ್ ನೀಡಲು ಕೈಜೋಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ಎಂ.ಎಸ್.ನಾಗರಾಜ್, ಸಿಡಿಎ ಮಾಜಿ ಸದಸ್ಯ ರಾಜಕುಮಾರ, ನಗರ ಮಂಡಲ ಉಪಾಧ್ಯಕ್ಷ ರೇವನಾಥ್, ಆಶ್ರಯ ಸಮಿತಿ ಮಾಜಿ ಸದಸ್ಯ ನವೀನ್ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ಯೋಗೀಶ್, ನಗರ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಧನಂಜಯ್, ಉಪಾಧ್ಯಕ್ಷ ರವಿಕುಮಾರ್, ನಗರ ಯುವ ಮೋರ್ಚಾ ಉಪಾಧ್ಯಕ್ಷ ಅರುಣ್, ಮುಖಂಡರಾದ ಸತೀಶ್ ಕುಪ್ಪೆನಹಳ್ಳಿ, ಜೇಮ್ಸ್, ನಂಜುAಡಪ್ಪ, ಧರ್ಮರಾಜು, ಗಣೇಶ್, ರಾಜು, ಪ್ರದೀಪ್, ವಿಜಯ್ ಮತ್ತಿತರರಿದ್ದರು.