

ಶನಿವಾರಸಂತೆ: ಯೂತ್ ಫಾರ್ ಸೇವಾ ಸಂಸ್ಥೆಯಿಂದ ಶನಿವಾರಸಂತೆ ತ್ಯಾಗರಾಜ ಕಾಲನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 1ರಿಂದ 7ನೇ ತರಗತಿ ಎಲ್ಲ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ನೋಟ್ ಪುಸ್ತಕ, ಪೆನ್ನು, ಪೆನ್ಸಿಲ್, ಪೌಚ್ ಮತ್ತಿತರ ಲೇಖನಿ ಸಾಮಗ್ರಿಗಳನ್ನು ಸಂಸ್ಥೆ ಪ್ರತಿನಿಧಿ ಹಾರೆಹೊಸೂರು ಮೊಯ್ದು ವಿತರಿಸಿದರು. ಶನಿವಾರಸಂತೆ ಕ್ಲಸ್ಟರ್ ಸಿಆರ್‌ಪಿ ಸಿ.ಕೆ.ದಿನೇಶ್, ಪ್ರಮುಖರಾದ ಫಣಿಯಮ್ಮ, ಸೇವಾ ಸಂಸ್ಥೆಯ ಕಾವ್ಯಾ, ಮುಖ್ಯ ಶಿಕ್ಷಕ ಪುಟ್ಟಸ್ವಾಮಿ, ಸಹ ಶಿಕ್ಷಕರಾದ ರಾಜಪ್ಪ, ಬೋಜಪ್ಪ, ಲತಾಮಣಿ, ಸುನಂದಾ, ಸುಧಾ, ಧನು ಇತರರು ಇದ್ದರು.