

ಉಡುಪಿ: ಶಾಲಾ-ಕಾಲೇಜು ಪರೀಕ್ಷೆಗಳಿಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಬಹಳಷ್ಟು ವ್ಯತ್ಯಾಸಗಳಿದ್ದು, ನಿರಂತರ ಕಲಿಕೆಯಿಂದ ಮಾತ್ರ ಉತ್ತೀರ್ಣರಾಗಬಹುದು. ಪದವಿಯಲ್ಲಿ ಹೆಚ್ಚು ಅಂಕ ಗಳಿಸಿದರೂ ಕೌಶಲ್ಯಗಳಿಲ್ಲದಿದ್ದರೆ ಹುದ್ದೆಗಳಿಸಲು ಸಾಧ್ಯವಾಗುವುದಿಲ್ಲ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ. ಸಿದ್ದಲಿಂಗಪ್ಪ ಹೇಳಿದರು.
ಶನಿವಾರ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸಾೃಟಿ ವತಿಯಿಂದ ಜಿಲ್ಲೆಯ 25 ಕನ್ನಡ ಮಾಧ್ಯಮ ಶಾಲೆಗಳಿಗೆ ಸುಮಾರು 12 ಲಕ್ಷ ರೂ. ಮೌಲ್ಯದ ನೋಟ್ ಪುಸ್ತಕ, ಶೈಕ್ಷಣಿಕ ಪರಿಕಗಳ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
10ರಲ್ಲಿ 8 ಮಂದಿ ಹೊರಜಿಲ್ಲೆಯವರು
ಅವಿಭಜಿತ ದ.ಕ. ಜಿಲ್ಲೆಯಲ್ಲಿ ಪೊಲೀಸ್, ಕಂದಾಯ ಮೊದಲಾದ ಇಲಾಖೆಗಳಲ್ಲಿ ಸ್ಥಳಿಯ ಅಧಿಕಾರಿಗಳ ಸಂಖ್ಯೆ ಬಹಳಷ್ಟು ಕಡಿಮೆ ಇದೆ. ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳಲ್ಲಿ 10ರಲ್ಲಿ 8 ಮಂದಿ ಹೊರ ಜಿಲ್ಲೆಯವರಿದ್ದಾರೆ. ಸ್ಥಳಿಯ ಅಧಿಕಾರಿಗಳಿದ್ದರೆ ಆಯಾ ಭಾಗದ ಸಮಸ್ಯೆ ಪರಿಹರಿಸಲು ಸುಲಭವಾಗುತ್ತದೆ. ಕರಾವಳಿಯವರು ಸರ್ಕಾರಿ ಉದ್ಯೋಗ ಪಡೆಯುವಲ್ಲಿ ಹೆಚ್ಚು ಗಮನಹರಿಸಬೇಕು ಎಂದರು.
ಶಿಕ್ಷಣ ಇಲಾಖಾ ಉಪನಿರ್ದೇಶಕ ಗಣಪತಿ ಕೆ. ಮಾತನಾಡಿ, ಕಳೆದ ಬಾರಿ ಎಸ್ ಎಸ್ ಎಲ್ ಸಿ ಪರೀೆಯಲ್ಲಿ ಉಡುಪಿ ಜಿಲ್ಲೆ 17ರಿಂದ ಪ್ರಥಮ ಸ್ಥಾನಕ್ಕೆ ತಲುಪಲು ಶಿಕ್ಷಕರು, ಪೋಷಕರ ಜೊತೆಗೆ ದಾನಿಗಳ ಸಹಕಾರವೂ ಕಾರಣವಾಗಿದೆ. ಕನ್ನಡ ಶಾಲಾ ಮಕ್ಕಳು ಪ್ರತಿಭಾನ್ವಿತರಾಗಿದ್ದು, ಉತ್ತಮ ಕಲಿಕಾ ವಾತಾವರಣ ನಿರ್ಮಾಣಕ್ಕೆ ಸಂ ಸಂಸ್ಥೆಗಳ ಶೈಕ್ಷಣಿಕ ಪ್ರೋತ್ಸಾಹವೂ ಅಗತ್ಯ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ಬೆಳೆಸಬೇಕು. ಪರೀೆಯಲ್ಲಿ ಹಿನ್ನಡೆ ಅನುಭವಿಸಿದಾಗಲೂ ಬೆಂಬಲ ನೀಡುವುದನ್ನು ಮರೆಯಬಾರದು. ಇದರಿಂದ ಮಕ್ಕಳು ಖಿನ್ನತೆ ಒಳಗಾಗಿ ಅನಾಹುತಗಳಾಗುವುದು ತಪುತ್ತದೆ ಎಂದರು.
ಸಂಘದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಜಾರ್ಜ್ ಸಾಮ್ಯುವೆಲ್ ಹಾಗೂ ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ. ಶೇರಿಗಾರ್, ಉದ್ಯಮಿ ಪುರುಷೋತ್ತಮ ಶೆಟ್ಟಿ ಉಪಸ್ಥಿತರಿದ್ದರು. ಎಂ.ಜಿ.ಎಂ. ಕಾಲೇಜಿನ ನಿವೃತ್ತ ರಾಜಕೀಯ ಶಾಸ್ತ್ರ ಮುಖ್ಯಸ್ಥ ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ವ್ಯಕ್ತಿತ್ವ ನಿಮಾರ್ಣದಲ್ಲಿ ಶಿಕ್ಷಣದ ಪಾತ್ರ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.