ಹುತ್ತಕ್ಕೆ ಹಾಲು ಹಾಕುವುದು ಸರಿಯಲ್ಲ: ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ ಹೇಳಿಕೆ

2
Published on

ಮಂಡ್ಯ: ಹುತ್ತಕ್ಕೆ ಹಾಲು ಹಾಕುವುದು ಗೊಡ್ಡು ಸಂಪ್ರದಾಯ. ಹಾವು ಹಾಲು ಕುಡಿಯುವುದಿಲ್ಲ. ಆದ್ದರಿಂದ ಅದೇ ಹಾಲನ್ನು ಮಕ್ಕಳಿಗೆ ಕೊಡಿ ಎಂದು ಕುಂಬಳಗೂಡು ಚನ್ನಬಸವ ಜ್ಞಾನಪೀಠದ ಜಗದ್ಗುರು ಡಾ.ಚನ್ನಬಸವಾನಂದ ಸ್ವಾಮೀಜಿ ಸಲಹೆ ನೀಡಿದರು.

ನಗರದ ಹೊಸಹಳ್ಳಿ ಸರ್ಕಾರಿ ಶಾಲೆಯಲ್ಲಿ ಸೋಮವಾರ ಮಕ್ಕಳಿಗೆ ಹಾಲು ವಿತರಿಸಿ ಮಾತನಾಡಿದ ಅವರು, ಕಳೆದೊಂದು ವಾರದಿಂದ ಮಂಡ್ಯ ಜಿಲ್ಲಾದ್ಯಂತ ಬಸವ ಜ್ಯೋತಿಯನ್ನ ಭಕ್ತರಿಗೆ ದರ್ಶನ ಮಾಡಿಸುವುದರ ಜತೆಗೆ ಬಸವಾದಿ ಶರಣರ ವಿಚಾರಗಳನ್ನು ತಿಳಿಸಲಾಗುತ್ತಿದೆ. ಮೂಢನಂಬಿಕೆಯಿಂದ ನಾಗರಪಂಚಮಿಯ ದಿನ ಹುತ್ತಕ್ಕೆ ಹಾಲನ್ನ ಹಾಕುತ್ತಾರೆ. ಅರಿಶಿಣ ಕುಂಕುಮ ಚಿಲ್ಲರೆ ಕಾಸಿನ ಜತೆಗೆ ಹಾಲು ಹಾಕುವುದರಿಂದ ಹಾವು ಉಸಿರು ಗಟ್ಟಿ ಸಾಯುತ್ತದೆ. ಹಾಲು ಅಮೃತಕ್ಕೆ ಸಮಾನ. ಮಾತ್ರವಲ್ಲದೆ ಮಕ್ಕಳಿಗೆ ಜೀವ ಶಕ್ತಿ ತುಂಬುವ ಒಳ್ಳೆಯ ಆಹಾರ ಎಂದರು.

ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್, ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಬೆಟ್ಟಹಳ್ಳಿ ಎಂ.ಎಸ್.ಮಂಜುನಾಥ, ಬಸವ ಫೌಂಡೇಶನ್ ಅಧ್ಯಕ್ಷೆ ಅರ್ಪಣ, ಈರಮ್ಮ, ರೇಣುಕಪ್ಪ, ಕಮಲಮ್ಮ, ಚಂದ್ರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net