ಅನಾಥ ಮಕ್ಕಳಿಗೆ ಹಾಲು-ಬಿಸ್ಕತ್ ವಿತರಣೆ

h22-kallappa walikar
Published on

ಹುಬ್ಬಳ್ಳಿ: ಮಾನವ ಬಂಧುತ್ವ ವೇದಿಕೆ-ಕರ್ನಾಟಕ ಹಾಗೂ ವಿವಿಧ ಬಸವ ಪರ ಸಂಘಟನೆಗಳ ಆಶ್ರಯದಲ್ಲಿ ಸೋಮವಾರ ಇಲ್ಲಿಯ ಉಣಕಲ್​ನ ಬಾಲಮಂದಿರದಲ್ಲಿ ಅನಾಥ ಮಕ್ಕಳಿಗೆ ಹಾಲು ಹಾಗೂ ಬಿಸ್ಕತ್ ವಿತರಿಸಲಾಯಿತು.

ವೇದಿಕೆ ಮುಖ್ಯಸ್ಥ ಕಲ್ಲಪ್ಪ ವಾಲಿಕಾರ ಮಾತನಾಡಿ, ಪ್ರತಿ ವರ್ಷವೂ ನಾಗರ ಪಂಚಮಿ ದಿನದಂದು ದೇಶಾದ್ಯಂತ ಕೋಟ್ಯಂತರ ರೂ. ಖರ್ಚು ಮಾಡಿ, ಕಲ್ಲು ನಾಗರ ಮೂರ್ತಿಗೆ ಹಾಲು ಎರೆಯಲಾಗುತ್ತಿದೆ. ಇದರ ಬದಲು ಅನಾಥರು, ದೀನ-ದಲಿತರಿಗೆ ವಿತರಿಸಿದರೆ ಮಾನವ ಸಂಪನ್ಮೂಲ ಸದೃಢವಾಗುತ್ತದೆ. ದೇಶದ ಆರ್ಥಿಕ ಸುಸಿತ್ಥಿಗೂ ಇವರು ಕಾರಣರಾಗಬಲ್ಲರು ಎಂದರು.

ಶಿವಪ್ಪ ನಾಗೋಜಿ, ಕೇದಾರ ಕಬಾಡಗಿ, ಪ್ರಕಾಶ ಹೆಸರೂರ, ಉಳ್ಳಪ್ಪ ಪರಣ್ಣವರ, ಅನ್ನಪೂರ್ಣ ಪಾಟೀಲ, ಈಶ್ವರ ಬೆಂಗೇರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net