ಮಕ್ಕಳಾಗದವರಿಗೆ ಔಷಧ ವಿತರಣೆ 12ರಂದು

HKR KANETSH
Published on

ಹಿರೇಕೆರೂರ: ತಾಲೂಕಿನ ಸಾತೇನಹಳ್ಳಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಮಾರುತಿ (ಶಾಂತೇಶ) ದೇವರ ದೇವಸ್ಥಾನದಲ್ಲಿ ದಸರಾ ಹಬ್ಬದ ನಿಮಿತ್ತ ಮಕ್ಕಳಾಗದ ಮಹಿಳೆಯರು, ಬರಡು ದನಗಳಿಗೆ ದೇವರ ಹೆಸರಿನಲ್ಲಿ ಕಾಯಿ ಮೂಲಕ ಔಷಧ ನೀಡುವುದು ಸೇರಿ ವಿವಿಧ ಧಾರ್ವಿುಕ ಕೈಂಕರ್ಯಗಳು ಅ. 12ರಂದು ಜರುಗಲಿವೆ. ದೇವಸ್ಥಾನದಲ್ಲಿ ಅಂದು ಬೆಳಗ್ಗೆ 6 ಗಂಟೆಗೆ ಶ್ರೀಶಾಂತೇಶ (ಮಾರುತಿ) ದೇವರಿಗೆ ಪಂಚಾಮೃತ ಅಭಿಷೇಕ, 8 ಗಂಟೆಗೆ ಶಿವಾಲಿ ಮೂಕಪ್ಪ ಸ್ವಾಮಿಗಳ ಸಾನ್ನಿಧ್ಯದಲ್ಲಿ ಅಲಂಕಾರ ಪೂಜೆ, ಮಧ್ಯಾಹ್ನ 12 ಗಂಟೆಗೆ ರಶ್ಮಿ ಉಪ್ಪಾರ, ರಾಘವೇಂದ್ರ ಕೃಷ್ಣಪ್ಪ ರಾಯ್ಕರ ಕಡಕೋಳ ಅವರಿಂದ ಅನ್ನ ಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಅರ್ಚಕ ವಾಮನಚಾರ್ಯ, ಸಂಜೀವಾಚಾರ್ಯ ಅವರಿಂದ ಮಕ್ಕಳಾಗದ ಮಹಿಳೆಯರಿಗೆ, ಬರಡು ದನಗಳಿಗೆ ದೇವರ ಆಶೀರ್ವಾದದ ತೆಂಗಿನಕಾಯಿಯೊಂದಿಗೆ ಔಷಧ ವಿತರಣೆ ನಡೆಯಲಿದೆ. ಸಂಜೆ 4.30ಕ್ಕೆ ಬನ್ನಿ ಮುಡಿಯುವ ಉತ್ಸವ ಜರುಗಲಿದೆ ಎಂದು ಮಾರುತಿ(ಶಾಂತೇಶ) ದೇವಸ್ಥಾನ ಟ್ರಸ್ಟ್ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net