

ಮಹಾಲಿಂಗಪುರ: ಬಿರುಬಿಸಿಲಿನಲ್ಲಿ ಪಾದಯಾತ್ರೆ ಕೈಗೊಂಡಿರುವ ಶ್ರೀಶೈಲ ಪಾದಯಾತ್ರಿಗಳ ಸುಗಮ ಯಾತ್ರೆಗಾಗಿ ಕಾಳಜಿವಹಿಸಿ ಉಚಿತವಾಗಿ ಔಷಧ ವಿತರಣೆ ಮಾಡುತ್ತಿರುವ ಮಹಾಲಿಂಗಪುರ ಔಷಧ ವ್ಯಾಪಾರಸ್ಥರ ಸಂಘದ ಕಾರ್ಯ ಶ್ಲಾಘನೀಯ ಎಂದು ಡಾ. ಹರೀಶ ಬೆಳಗಲಿ ಹೇಳಿದರು.
ರನ್ನಬೆಳಗಲಿ ಕೆನಾಲ ಹತ್ತಿರ ನಿರ್ಮಿಸಿದ ಟೆಂಟ್‌ನಲ್ಲಿ ಮಹಾಲಿಂಗಪುರ ಔಷಧ ವ್ಯಾಪಾರಸ್ಥರ ಸಂಘದಿಂದ ಆಯೋಜಿಸಿದ್ದ ಶ್ರೀಶೈಲಕ್ಕೆ ಪಾದಯಾತ್ರೆಗಳ ಮೂಲಕ ತೆರಳುತ್ತಿರುವವರಿಗೆ ಉಚಿತವಾಗಿ ಔಷಧ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರೋಪಕಾರ ಮಾಡುವುದರಿಂದ ಮನುಷ್ಯನಿಗೆ ಸಂತೃಪ್ತಿ ಇರುತ್ತದೆ. ಶ್ರೀಶೈಲ ಮಲ್ಲಿಕಾರ್ಜುನನ ದರ್ಶನ ಅಪೇಕ್ಷಿಸಿ ಯಾತ್ರೆಗೆ ತೆರಳುತ್ತಿರುವ ಭಕ್ತರ ಸೇವೆ ಸ್ವತಃ ಮಲ್ಲಿಕಾರ್ಜುನನ ಸೇವೆಗೆ ಸಮ. ಏಕೆಂದರೆ ಆ ಮಲ್ಲಿಕಾರ್ಜುನ ತನ್ನೆಡೆಗೆ ಆಗಮಿಸುತ್ತಿರುವ ಭಕ್ತರ ಮೇಲೆ ಸದಾ ಗಮನ ಹರಿಸಿರುತ್ತಾನೆ. ಆತನ ದರ್ಶನಕ್ಕೆ ಹೊರಟವರ ಸೇವೆ ಶ್ರೇಷ್ಠ ಎಂದರು.
ಡಾ.ರಮೇಶ ಪತ್ತಾರ ಹಾಗೂ ಡಾ.ಶಿವಾನಂದ ನುಚ್ಚಿ ಮಾತನಾಡಿ, ಶ್ರೀಶೈಕ್ಕೆ ತೆರಳುತ್ತಿರುವ ಯಾತ್ರಿಗಳಿಗೆ ಮಾರ್ಗ ಮಧ್ಯೆ ಒದಗಬಹುದಾದ ಆರೋಗ್ಯ ಸಮಸ್ಯೆ ಗ್ರಹಸಿ ಮುನ್ನೆಚ್ಚರಿಕೆಯಾಗಿ ಔಷಧ ಮತ್ತು ಮಾತ್ರೆ ನೀಡಲಾಗುತ್ತಿದೆ ಎಂದರು.
ಈ ಸತ್ಕಾರ್ಯಕ್ಕೆ ವಿಜಯಪುರದ ಶ್ವೇತಾ ಾರ್ಮಾ, ಬನಹಟ್ಟಿಯ ರಾಠಿ ಾರ್ಮಾ, ಪ್ರಜ್ವಲ ಾರ್ಮಾ, ಜಮಖಂಡಿಯ ಸತ್ವರ್ಶಿ ಾರ್ಮಾ, ಪದ್ಮಾ ಾರ್ಮಾ ಹಾಗೂ ಮಹಾಲಿಂಗಪುರದ ಎಲ್ಲ ಾರ್ಮಾ ಸಂಸ್ಥೆಯವರಿಂದ ಸಂಗ್ರಹಿಸಲಾದ ಔಷಧ ವಿತರಿಸಲಾಯಿತು. ನೋವು ನಿವಾರಕ ಮಾತ್ರೆಗಳು, ಔಷಧ, ಜೆಲ್, ಗ್ಯಾಸ್ಟ್ರಿಕ್ ಮಾತ್ರೆ, ಜ್ವರ, ತಲೆನೋವು ಮಾತ್ರೆ, ಚರ್ಮರೋಗ ಔಷಧ ಹೀಗೆ ನಾನಾ ವಿಧದ ಔಷಧಗಳನ್ನು ಉಚಿತವಾಗಿ ವಿತರಿಸಲಾಯಿತು.
ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ಔಷಧ ವಿತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಠಾಣಾಧಿಕಾರಿ ಕಿರಣ ಸತ್ತಿಗೇರಿ, ಶೇಖರ ಅಂಗಡಿ, ಶ್ರೀಶೈಲಪ್ಪ ಉಳ್ಳಾಗಡ್ಡಿ, ಡಾ.ಮಂಜುನಾಥ ಚನ್ನಾಳ, ಡಾ.ಮಾರುತಿ ಮೇದಾರ, ಡಾ.ಶಂಕರ ಹುಕ್ಕೇರಿ, ಮಹಾಂತೇಶ ತಿರಕನ್ನವರ, ಅನಿಲ ಉಳ್ಳಾಗಡ್ಡಿ, ಶ್ರೀಶೈಲ ಹಿಪ್ಪರಗಿ, ರಾಜು ಬಡಿಗೇರ, ಕಿರಣ ಗುಂಡಾ, ಬಸವರಾಜ ಶಿರೋಳ, ಪ್ರಕಾಶ ಹೊಸೂರ, ಅಲ್ಲಪ್ಪ ದೊಡ್ಡಟ್ಟಿ, ರಾಜು ನಂದೆಪ್ಪನವರ, ರಾಜು ಬಿದರಿ, ಸಿದ್ದು ಕೊಣ್ಣೂರ, ಪ್ರಭು ಬ್ಯಾಳಿ, ಶಿವಾನಂದ ಬಡಿಗೇರ, ಸಂಜು ಒಂಟಗೋಡಿ ಇದ್ದರು.