ಮೆರವಣಿಗೆ ಮೂಲಕ ಮಂತ್ರಾಕ್ಷತೆ ವಿತರಣೆ

8 bannur 1
ಬನ್ನೂರು ಪಟ್ಟಣದಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರದ ದಿವ್ಯ ಮಂತ್ರಾಕ್ಷತೆಯನ್ನು ಮೆರವಣಿಗೆ ಮೂಲಕ ಮನೆ ಮನೆಗೆ ವಿತರಿಸಲಾಯಿತು.
Published on

ಬನ್ನೂರು: ಅಯೋಧ್ಯೆಯ ಶ್ರೀರಾಮ ಮಂದಿರದ ದಿವ್ಯ ಮಂತ್ರಾಕ್ಷತೆಯನ್ನು ಸೋಮವಾರ ಮೆರವಣಿಗೆಯ ಮೂಲಕ ಮನೆ ಮನೆಗೆ ವಿತರಣೆ ಮಾಡಲಾಯಿತು.

ಪಟ್ಟಣದ ಬಸ್ ನಿಲ್ದಾಣ ಸಮೀಪದ ಶ್ರೀ ಕೋದಂಡರಾಮ ದೇವಾಲಯದಿಂದ ಆರಂಭವಾದ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಾಗಿತು. ಭಕ್ತರು ದಾರಿಯುದ್ಧಕ್ಕೂ ಶ್ರೀರಾಮನ ಕುರಿತು ಜಯಘೋಷಹಾಕಿದರು. ಪ್ರಮುಖರಾದ ಡಾ.ಮಹೇಂದ್ರಸಿಂಗ್ ಕಾಳಪ್ಪ, ರಾಮಚಂದ್ರು, ಬಿ.ಎಂ.ಸುರೇಶ್, ಮಾಯೀಗೌಡ, ಸುರೇಶ್, ದೇವರಾಜು, ದಾಸಪ್ಪ, ಶ್ರೀನಿವಾಸ್ ಅರ್ಚಕ ಸತೀಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net