

ಅರಕಲಗೂಡು : ಅತಿ ವೃಷ್ಟಿಯಿಂದಾಗಿ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಮನೆಗಳು ಬಿದ್ದು ಹೋಗಿವೆ. ಹಲವು ಕಡೆ ಅಪಾರ ಪ್ರಮಾಣದ ಬೆಳೆ ನಷ್ಟವಾಗಿವೆ. ಸಂಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿದಾಗ ಮಾನವ ಜನ್ಮ ಸಾರ್ಥಕವಾಗುತ್ತದೆ ಎಂದು ಚೈತನ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಂಸ್ಥಾಪಕ ಎಸ್.ಎಚ್.ಮಜೀದ್ ಹೇಳಿದರು.
ತಾಲೂಕಿನ ಹೊನ್ನವಳ್ಳಿ ಗ್ರಾಮದಲ್ಲಿ ಅಮೆಜಾನ್ ಡೊನೆಟ್ಕಾರ್ಟ್ ಪೌಂಡೇಷನ್ ಸಹಯೋಗದಲ್ಲಿ ನೆರೆ ಸಂತ್ರಸ್ತರಿಗೆ ಆಹಾರ ಸಾಮಗ್ರಿಗಳ ಕಿಟ್ ಹಾಗೂ ತಾಡ ಪಾತ್ರೆಗಳನ್ನ ವಿತರಿಸಿ ಅವರು ಮಾತನಾಡಿದರು.
ಜಿಲ್ಲೆಯ ನದಿ ತೀರದ ಹಳ್ಳಿಗಳಲ್ಲಿ ಹಾಗೂ ಮಲೆನಾಡು ಭಾಗದ ಹಳ್ಳಿಗಳಲ್ಲಿ ಬಹಳ ನಷ್ಟವಾಗಿದೆ. ಆಕಸ್ಮಿಕವಾಗಿನಡೆಯುವ ಇಂತಹ ಪ್ರವಾಹ ಸಂದರ್ಭದಲ್ಲಿ ನೊಂದವರಿಗೆ ಸಹಾಯ ಮಾಡಬೇಕು ಎಂದರು.
ಸಂಸ್ಥೆಯ ಸಂಯೋಜಕ ವೆಂಕಟೇಶ್, ವಲಯ ಮೇಲ್ವಿಚಾರಕ ಶೇಖರಗೌಡ, ಸಂಪರ್ಕ ಕಾರ್ಯಕರ್ತ ಚಂದ್ರಶೇಖರ್ ಇತರರಿದ್ದರು.