ಪಾಣೆಮಂಗಳೂರಿನಲ್ಲಿ ಆಶ್ರಮಕ್ಕೆ ಸಾಮಗ್ರಿ ವಿತರಣೆ

New Project (18)
Published on

ಬಂಟ್ವಾಳ: ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನಾಚರಣೆ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು. ಜನ್ಮದಿನಾಚರಣೆಯ ಅಂಗವಾಗಿ ಕನ್ಯಾನ ಭಾರತ್ ಸೇವಾಶ್ರಮಕ್ಕೆ ದಿನಬಳಕೆ ಸಾಮಗ್ರಿ ಹಾಗೂ ಆರ್ಥಿಕ ಸಹಾಯವನ್ನು ಬಿ.ರಮಾನಾಥ ರೈ ಹಸ್ತಾಂತರಿಸಿದರು.

ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ಪೂಜಾರಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಭಂಡಾರಿ, ಕೆ.ಸಂಜೀವ ಪೂಜಾರಿ, ಅಬ್ಬಾಸ್ ಆಲಿ, ಬೇಬಿ ಕುಂದರ್, ಚಿತ್ತರಂಜನ್ ಶೆಟ್ಟಿ, ವಾಸು ಪೂಜಾರಿ, ಐಡಾ ಸುರೇಶ್, ಮಲ್ಲಿಕಾ ಶೆಟ್ಟಿ, ಜೋಸ್ಪಿನ್ ಡಿಸೋಜ, ಪೌಝಿಯಾ, ಮಂಜುಳಾ ಕುಶಾಲ ಪೆರಾಜೆ, ರೇಷ್ಮಾ ಟೆಲ್ಲಿಸ್, ಶೈಲಜಾ ರಾಜೇಶ್, ಆಯಿಷಾ, ಆಶಿಫಾ, ವಸಂತಿ ನೆಟ್ಲ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net