ಕಾಡಂಚಿನ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಣೆ

30 HANUR 1
ಕೋಣನಕೆರೆ ಬುಡಕಟ್ಟು ಆಶ್ರಮ ಶಾಲೆ ಮಕ್ಕಳಿಗೆ ರೋಟರಾಕ್ಟ್ ಕ್ಲಬ್ ಹಾಗೂ ಕಾನನ ಕಮ್ಯೂನಿಟಿ ಟ್ರಸ್ಟ್ ವತಿಯಿಂದ ಕಲಿಕಾ ಸಾಮಗ್ರಿ ವಿತರಿಸಲಾಯಿತು. ಅಪೇಕ್ಷಾ ಹೆಗ್ಡೆ, ರಾಜು, ನಂದಿನಿ, ಮಹದೇವಸ್ವಾಮಿ ಇತರರು ಇದ್ದರು.
Published on

ಹನೂರು: ತಾಲೂಕಿನ ಕಾಡಂಚಿನ ಹೊಸಪಾಳ್ಯ, ಪಾಲಾರ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕೋಣನಕೆರೆ ಬುಡಕಟ್ಟು ಆಶ್ರಮ ಶಾಲೆಯ ಮಕ್ಕಳಿಗೆ ಬೆಂಗಳೂರು ರಾಮಯ್ಯ ವಿಜ್ಞಾನ ವಿಶ್ವವಿದ್ಯಾಲಯದ ರೋಟರಾಕ್ಟ್ ಕ್ಲಬ್ ಹಾಗೂ ಕೋಣನಕೆರೆ ಕಾನನ ಕಮ್ಯೂನಿಟಿ ಟ್ರಸ್ಟ್ ವತಿಯಿಂದ ನೋಟ್‌ಬುಕ್ ಹಾಗೂ ಕಲಿಕಾ ಸಾಮಗ್ರಿ ವಿತರಿಸಲಾಯಿತು.

ಮೂರೂ ಶಾಲೆಗಳ 350 ಮಕ್ಕಳಿಗೆ 1,500ಕ್ಕೂ ಹೆಚ್ಚು ನೋಟ್ ಬುಕ್ ಹಾಗೂ ಕಲಿಕಾ ಸಾಮಗ್ರಿ ವಿತರಿಸಲಾಯಿತಲ್ಲದೆ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಜತೆಗೆ ಹೊಸಪಾಳ್ಯ ಶಾಲೆಯ ಕಟ್ಟಡಗಳಿಗೆ ಪೇಂಟಿಂಗ್ ಮಾಡಿಸಲಾಯಿತು.

ಸಹಾಯಕ ಪ್ರಾಧ್ಯಾಪಕ ದಾಮೋದರ್ ನಾಯಕ್ ಮಾತನಾಡಿ, ಶಿಕ್ಷಣ ದೇಶದ ಭವಿಷ್ಯದ ಅಡಿಗಲ್ಲು. ಹಾಗಾಗಿ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಹಲವು ಸವಲತ್ತುಗಳನ್ನು ಒದಗಿಸುತ್ತಿದೆ. ನಗರ ಪ್ರದೇಶದಲ್ಲಿ ಪಾಲಕರು ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಂತೆ ಕಲಿಕಾ ಸಾಮಗ್ರಿಯನ್ನು ಒದಗಿಸುತ್ತಿದ್ದು, ಗ್ರಾಮೀಣ ಪ್ರದೇಶ ಅದರಲ್ಲೂ ಬಡವರ್ಗದ ಜನರೇ ಹೆಚ್ಚು ವಾಸಿಸುವ ಹನೂರು ಭಾಗದ ಕಾಡಂಚಿನ ಗ್ರಾಮಗಳ ಮಕ್ಕಳು ಇದರಿಂದ ವಂಚಿತರಾಗುತ್ತಿದ್ದಾರೆ. ಈ ದಿಸೆಯಲ್ಲಿ ಸಂಘ, ಸಂಸ್ಥೆಗಳು ಅಗತ್ಯ ಕಲಿಕಾ ಸಾಮಗ್ರಿ ಒದಗಿಸುವುದರ ಮೂಲಕ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸುತ್ತಿದೆ ಎಂದರು.

ಕ್ಲಬ್ ಹಾಗೂ ಕಾನನ ಟ್ರಸ್ಟ್ ವತಿಯಿಂದ ಕಾಡಂಚಿನ ಶಾಲೆ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಿಸಲಾಗಿದ್ದು, ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆದು ಓದಿನ ಕಡೆ ಹೆಚ್ಚು ಗಮನ ನೀಡಿ ಶೈಕ್ಷಣಿಕವಾಗಿ ಸಾಧನೆ ಮಾಡಬೇಕು. ಈ ಸಂಬಂಧ ಪಾಲಕರು ಮಕ್ಕಳಿಗೆ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.

ರೋಟರಾಕ್ಟ್ ಕ್ಲಬ್ ಅಧ್ಯಕ್ಷ ಅಪೇಕ್ಷಾ ಕೆ.ಹೆಗ್ಡೆ, ಕಾರ್ಯದರ್ಶಿ ಎನ್.ರಾಜು, ಸದಸ್ಯರದ ಎಂ.ಎಸ್.ನಂದಿನಿ, ಎಸ್.ಎ.ಗೌಡ, ಕಾನನ ಟ್ರಸ್ಟ್ ಮುಖ್ಯಸ್ಥ ಜೆ.ಮಹದೇವಸ್ವಾಮಿ, ಮುಖ್ಯ ಶಿಕ್ಷಕ ಅಂಕಪ್ಪ, ಶಿಕ್ಷಕರಾದ ಸಿದ್ದರಾಜು, ಶಶಿಕುಮಾರ್, ಮಲ್ಲೇಶ್, ಮುಖಂಡ ಪುಟ್ಟಮಾದ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net