

ಲಿಂಗದಹಳ್ಳಿ: ಶಿಕ್ಷಣ ಪ್ರೇಮಿಗಳು ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ನೀಡಬೇಕು ಎಂದು ಉಡೇವಾ ಗ್ರಾಪಂ ಉಪಾಧ್ಯಕ್ಷೆ ಸುಜಿತಾ ಸಂತೋಷ್ ಹೇಳಿದರು. ಹಿಂಬ್ರವಳ್ಳಿಯ ಶ್ರೀಜಯ ಚಾರಿಟೆಬಲ್ ಟ್ರಸ್ಟ್ ಗೊಣಗಿಲಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ನೀಡಿದ ವಿವಿಧ ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿ, ಶಾಲಾ ವಿದ್ಯಾರ್ಥಿಗಳು ಪಠ್ಯದ ಜತೆಗೆ ಆಟೋಟ ಹಾಗೂ ವಿವಿಧ ಸಂಸ್ಕೃತ ಸ್ಪರ್ಧೆಗಳಲ್ಲಿ ಮುಂಚೂಣಿಯಲ್ಲಿರುವುದನ್ನು ಗಮನಿಸಿ ಹಿಂಬ್ರವಳ್ಳಿಯ ಶ್ರೀಜಯ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷರು ಕಲಿಕಾ ಸಾಮಗ್ರಿಗಳನ್ನು ನೀಡಿದ್ದು, ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಉಡೇವಾ ಗ್ರಾಪಂ ಅಧ್ಯಕ್ಷೆ ಭಾರತಿ ಸಿ. ರಾಜಪ್ಪ, ಸದಸ್ಯರಾದ ಟಿ.ಆಂಡಿ ಗೌಡ, ಲಕ್ಷ್ಮೀ ನಾಗರಾಜ್, ಎನ್.ಜಿ.ರಮೇಶ್, ರಚನಾ ಶ್ರೀನಿವಾಸ್, ಮುಖ್ಯಶಿಕ್ಷಕ ತಿಮ್ಮಪ್ಪ, ಸಹ ಶಿಕ್ಷಕ ಚಂದ್ರಮ್ಮ, ಧನಲಕ್ಷ್ಮೀ, ಸೌಭಾಗ್ಯ, ಎಸ್‌ಡಿಎಂಸಿ ಅಧ್ಯಕ್ಷ ಈಶ್ವರ್ ಇದ್ದರು.