23 ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ

mysore
Published on

ಮೈಸೂರು: ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದಿಂದ ಉನ್ನತ ಶಿಕ್ಷಣ ಪಡೆಯುತ್ತಿರುವ 23 ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು.


ರಾಮಕೃಷ್ಣನಗರದಲ್ಲಿರುವ ನಿಗಮದ ಜಿಲ್ಲಾ ಕಚೇರಿಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಇಂಜಿನಿಯರಿಂಗ್ ಮತ್ತು ವಿಜ್ಞಾನ ಪದವಿ ಓದುತ್ತಿರುವ ಅಂಬೇಡ್ಕರ್ ಕಾಲನಿ, ಭರತ್‌ನಗರ, ನವೋದಯ ಬಡಾವಣೆ, ಬುದ್ಧನಗರ, ಹೈವೇ ಸರ್ಕಲ್, ಧರ್ಮಸಿಂಗ್ ಕಾಲನಿ, ಸಾರ್ವಜನಿಕ ಹಾಸ್ಟೆಲ್, ಹೆಬ್ಬಾಳ್ ಕಾಲನಿಗಳ ವಿದ್ಯಾರ್ಥಿಗಳು ಈ ಸೌಲಭ್ಯ ಪಡೆದರು.


ನಿಗಮದ ಜಿಲ್ಲಾ ವ್ಯವಸ್ಥಾಪಕಿ ವಿನುತ್ ಮಾತನಾಡಿ, ವಿದ್ಯಾರ್ಥಿಗಳು ಅಂಬೇಡ್ಕರ್ ಅವರ ಆದರ್ಶವನ್ನು ಮೈಗೂಡಿಸಿಕೊಳ್ಳಬೇಕು. ಬದುಕಿನಲ್ಲಿ ಶ್ರದ್ಧೆ, ಶಿಸ್ತು, ಸಮಯ ಪಾಲನೆ ಅಳವಡಿಸಿಕೊಳ್ಳಬೇಕು. ಪದವಿ ಓದುವಾಗಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಆರಂಭಿಸಬೇಕು ಎಂದು ತಿಳಿಸಿದರು.


ಮಾಜಿ ಮೇಯರ್ ನಾರಾಯಣ ಮಾತನಾಡಿ, ಪೌರಕಾರ್ಮಿಕರು ಇತರ ನಿಗಮಗಳಲ್ಲಿ ಸೌಲಭ್ಯ ಪಡೆಯಲು ಸಾಧ್ಯವಾಗುವುದಿಲ್ಲ ಎಂಬುದನ್ನು ಅರಿತು ಪೌರಕಾರ್ಮಿಕರ ನಿಗಮ ಸ್ಥಾಪಿಸಿದರು. ನಿಗಮದಿಂದ ದೊರೆಯುವ ಸೌಲಭ್ಯಗಳನ್ನು ಪಡೆದು ಪೌರಕಾರ್ಮಿಕರು ಅಭಿವೃದ್ಧಿ ಹೊಂದಬೇಕು ಎಂದರು.
ಪೌರಕಾರ್ಮಿಕರಾಗಿ ಕರ್ತವ್ಯನಿರತರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು. ವಿದ್ಯಾರ್ಥಿಗಳು ಚೆನ್ನಾಗಿ ಓದಿ ಸರ್ಕಾರಿ ಉದ್ಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು

.
ಸಫಾಯಿ ಕರ್ಮಚಾರಿ ಅನುಷ್ಠಾನ ಸಮಿತಿ ಮಾಜಿ ಸದಸ್ಯ ಎಸ್. ನಾಗರಾಜು ಮಾತನಾಡಿ, ಪೌರಕಾರ್ಮಿಕರ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ನೆರವಾಗಲೆಂದು ಲ್ಯಾಪ್‌ಟಾಪ್ ನೀಡಲಾಗಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.


ಪಾಲಿಕೆ ಮಾಜಿ ಸದಸ್ಯ ಆರ್.ಶಿವಣ್ಣ, ಮುಖಂಡರಾದ ಯತಿರಾಜ್, ಆರ್.ದಾಸ್, ಎನ್.ಪಿ.ಗುರುದತ್ತ ಮೂರ್ತಿ, ಕೆ.ನಾಗರತ್ನ ಮಂಜುನಾಥ್, ಲೋಕೇಶ್, ಗಗನ್, ಪ್ರಿಯಾಂಕ, ಕೆ.ಅಣ್ಣಾದೊರೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net