

ಗೋಣಿಕೊಪ್ಪ: ಪೌರ ಕಾರ್ಮಿಕರ ದಿನ ನಿತ್ಯದ ಶ್ರಮ ಶ್ಲಾಘನೀಯ ಕೆಲಸವಾಗಿದೆ. ಪೌರಕಾರ್ಮಿಕರು ತಮ್ಮ ಆರೋಗ್ಯ ಕಡೆಗೆ ನಿಗಾ ವಹಿಸಬೇಕು, ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಗೋಣಿಕೊಪ್ಪಲುವಿನ ಸಮಾಜ ಸೇವಕಿ ಕೊಟ್ಟಂಗಡ ವಿಜು ದೇವಯ್ಯ ಹೇಳಿದರು.
ಕೊಡಗಿನ ಸಾಂಪ್ರದಾಯಿಕ ಹಬ್ಬ ಕೈಲ್ ಪೊಳ್ದ್ ಪ್ರಯುಕ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಹಬ್ಬದ ಪ್ರಯುಕ್ತ ಸೋಮವಾರ ವಿಶೇಷ ಕಿಟ್ ವಿತರಿಸಿ ಮಾತನಾಡಿದರು.
ಕೊಡಗಿನ ಸಾಂಪ್ರದಾಯಿಕ ಹಬ್ಬವನ್ನು ಪೌರ ಕಾರ್ಮಿಕರು ಕೂಡ ಸಂಭ್ರಮಿಸಲಿ ಎಂಬ ಉದ್ದೇಶದಿಂದ ಕಿಟ್ ನೀಡಲಾಗಿದೆ. ಬಿಸಿಲು, ಮಳೆಯಲ್ಲಿ ದುಡಿಯುವ ಪೌರ ಕಾರ್ಮಿಕರು ಮುಂಜಾಗ್ರತೆ ವಹಿಸಲಿ ಎಂದರು.
ಪೌರ ಕಾರ್ಮಿಕ ಮಂಜು, ರಾಮ ಇತರರು ಇದ್ದರು.