ಅಪೌಷ್ಟಿಕತೆ ನಿವಾರಣೆಗೆ ಕಿಟ್ ವಿತರಣೆ

Distribution of kits to prevent malnutrition
ಹುನಗುಂದದಲ್ಲಿ ಬಿಜಾಪುರ ಇಂಟಿಗ್ರೇಟೆಡ್ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಹಾಗೂ ಜಿಲ್ಲಾ ಆರೈಕೆದಾರರ ಕಂಪನಿ ಬಾಗಲಕೋಟೆ ಅವರ ಸಂಯುಕ್ತ ಆಶ್ರಯದಲ್ಲಿ ನಬಾರ್ಡ್‌ನ ಎಲ್‌ಇಡಿಪಿ ಯೋಜನೆಯ ಅಡಿಯಲ್ಲಿ ತರಬೇತಿ ಹೊಂದಿದ ಮಹಿಳೆಯರಿಗೆ ಹಾಗೂ ಆರೈಕೆದಾರರಿಗೆ ಆಹಾರದ ಕಿಟ್ ವಿತರಿಸಲಾಯಿತು. ಕೀಟ ಶಾಸಜ್ಞೆ ತನುಜಾ, ಮಹಾಂತೇಶ ಅಗಸಿಮುಂದಿನ ಮತ್ತಿತರರಿದ್ದಾರೆ.
Published on

ಹುನಗುಂದ: ಮಹಿಳೆಯರಲ್ಲಿ ಅಪೌಷ್ಟಿಕತೆ ಹಾಗೂ ಪೋಷಕಾಂಶದ ಕೊರತೆ ಕಂಡು ಬಂದಿದ್ದು, ಅದನ್ನು ನಿವಾರಿಸುವ ನಿಟ್ಟಿನಲ್ಲಿ ಪೋಷಕಾಂಶಯುಕ್ತ ಆಹಾರದ ಕಿಟ್‌ಗಳನ್ನು ನೀಡಲಾಗಿದೆ ಎಂದು ಯಾರಾ ಡಿಜಿಟಲ್ ಾರ್ಮಿಂಗ್ ಕಂಪನಿಯ ಕೀಟ ಶಾಸಜ್ಞೆ ತನುಜಾ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಬಿಜಾಪುರ ಇಂಟಿಗ್ರೇಟೆಡ್ ರೂರಲ್ ಡೆವಲಪ್‌ಮೆಂಟ್ ಸೊಸೈಟಿ, ಯಾರಾ ಡಿಜಿಟಲ್ ಾರ್ಮಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹಾಗೂ ಕೇರರ್ಸ್ ವರ್ಲ್ಡ್ ವೈಡ್, ನಬಾರ್ಡ್, ಸೆಲ್ಕೋ ೌಂಡೇಶನ್, ಜಿಲ್ಲಾ ಆರೈಕೆದಾರರ ಕಂಪನಿಯ ಸಂಯುಕ್ತ ಆಶ್ರಯದಲ್ಲಿ ನಬಾರ್ಡ್‌ನ ಎಲ್‌ಇಡಿಪಿ ಯೋಜನೆಯ ಅಡಿಯಲ್ಲಿ ತರಬೇತಿ ಹೊಂದಿದ ಮಹಿಳೆಯರಿಗೆ ಹಾಗೂ ಆರೈಕೆದಾರರಿಗೆ ಪೋಷಕಾಂಶವುಳ್ಳ ಆಹಾರದ ಕಿಟ್ ವಿತರಿಸಿ ಅವರು ಮಾತನಾಡಿದರು.

ಬರ್ಡ್ಸ್ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಮಹಾಂತೇಶ ಅಗಸಿಮುಂದಿನ ಮಾತನಾಡಿ, ಸಂಸ್ಥೆಯ ಕಾರ್ಯ ಚಟುವಟಿಕೆಗಳು ಹಾಗೂ ಯಾರಾ ಕಂಪನಿಯ ಕುರಿತು ಕಿರುಪರಿಚಯಿಸಿ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು.

50 ಜನ ಆರೈಕೆದಾರರಿಗೆ ಪೋಷಕಾಂಶವುಳ್ಳ ಆಹಾರ ಧಾನ್ಯಗಳ 50 ಕೆಜಿಯ ಕಿಟ್ ವಿತರಿಸಲಾಯಿತು. ತಾಲೂಕಿನ ಎ್ಪಿಓ ಹಾಗೂ ಎಲ್‌ಇಡಿಪಿ ಯೋಜನೆ ಅಡಿಯಲ್ಲಿ ತರಬೇತಿ ಪಡೆದ 50 ಮಹಿಳೆಯರಿಗೆ ಪ್ರತಿಯೊಬ್ಬರಿಗೂ 3 ಜೇನು ಪೆಟ್ಟಿಗೆಯನ್ನು ನೀಡಲಾಯಿತು.

ಯಾರಾ ಡಿಜಿಟಲ್ ಾರ್ಮಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಎಚ್.ಆರ್. ಮ್ಯಾನೇಜರ್ ಸಿರಿಲ್ ಬೇಬಿ, ಆಗಸ್ತಿನ್ ಯುವರಾಜ, ಮಹಾದೇವ ಮೇತ್ರಿ, ಬರ್ಡ್ಸ್ ಸಂಸ್ಥೆಯ ಚೇರ್ಮನ್ ಪ್ರೊ. ಸಿ.ಜಿ ಹವಾಲ್ದಾರ, ಪ್ರವೀಣಕುಮಾರ ಅಗಸಿಮುಂದಿನ, ವಿಜಯಲಕ್ಷ್ಮೀ ತತ್ರಾಣಿ, ಮಹಾದೇವಿ ಕಡಪಟ್ಟಿ, ಸದಸ್ಯರಾದ ಬಿ. ಸಿ ಅಂಗಡಿ, ಎಸ್.ಎನ್. ಹಾದಿಮನಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net