ಕೊಡವ ಸಮಾಜದಲ್ಲಿ ಕಾವೇರಿ ತೀರ್ಥ ವಿತರಣೆ

18 ckm 1
ಚಿಕ್ಕಮಗಳೂರಿನ ಕೊಡವ ಸಮಾಜದಲ್ಲಿ ಕೊಡವ ಬಾಂದವರು ಕೊಡಗಿನ ತಲಕಾವೇರಿಯಿಂದ ತರಲಾದ ಪವಿತ್ರ ಕಾವೇರಿ ತೀರ್ಥಕ್ಕೆ ವಿಶೇಷ ಪೂಜೆ ಸಲ್ಲಿಸಿ ವಿರತಣೆ ಮಾಡಿದರು.
Published on

ಚಿಕ್ಕಮಗಳೂರು: ನಗರದ ಕೊಡವ ಸಮಾಜದಲ್ಲಿ ಶುಕ್ರವಾರ ಕೊಡವ ಬಾಂದವರು ಕೊಡಗಿನ ತಲಕಾವೇರಿಯಿಂದ ತರಲಾದ ಪವಿತ್ರ ಕಾವೇರಿ ತೀರ್ಥಕ್ಕೆ ವಿಶೇಷ ಪೂಜೆ ಸಲ್ಲಿಸಿ ವಿರತಣೆ ಮಾಡಿದರು.

ಗುರುವಾರ ಮುಂಜಾನೆ ಕೊಡಗು ಜಿಲ್ಲೆಯ ತಲಕಾವೇರಿಯ ಕಾವೇರಿ ನದಿಯ ಉಗಮ ಸ್ಥಾನದ ಕುಂಡಿಕೆಯಲ್ಲಿ ತೀರ್ಥೋದ್ಭವ ಆಗಿದ್ದು, ಈ ತೀರ್ಥವನ್ನು ಕೊಡವ ಸಮಾಜಕ್ಕೆ ತರಲಾಗಿತ್ತು. ಶುಕ್ರವಾರ ಮುಂಜಾನೆ ಜಿಲ್ಲೆಯ ವಿವಿಧೆಡೆ ಇರುವ ಕೊಡವರು ಇಲ್ಲಿಗೆ ಆಗಮಿಸಿ ಪವಿತ್ರ ಕಾವೇರಿ ತೀರ್ಥಕ್ಕೆ ಪೂಜೆ ಸಲ್ಲಿಸಿದ್ದರು. ಮಹಿಳೆಯರು ಕೊಡಗಿನ ಸಂಪ್ರಾದಾಯಿಕ ಸೀರೆಯನ್ನುಟ್ಟು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾವೇರಿ ಮಾತೆಗೆ ಪ್ರಾರ್ಥನೆ ಮಾಡಿ ಪೂಜೆ ಸಲ್ಲಿಸಿದ ಬಳಿಕ ಕಾವೇರಿ ತೀರ್ಥವನ್ನು ವಿತರಿಸಲಾಯಿತು.
ಪ್ರಾರ್ಥನೆ ಸಲ್ಲಿಸಿದ ಬಳಿಕ ಮಾತನಾಡಿದ ಕೊಡವ ಸಮಾಜದ ಪ್ರಮುಖ ಎಂ. ಅಪ್ಪಯ್ಯ, ಕೊಡವರಿಗೆ ಕಾವೇರಿ ಸಂಕ್ರಮಣ ಪವಿತ್ರವಾದ ಹಬ್ಬ ಮತ್ತು ಭಕ್ತಿ ಬಾವದ ಸಂಕೇತ. ಕೊಡವರು ಸಾಕಷ್ಟು ಜನರು ತೀರ್ಥ ಉದ್ಬವದÀ ದಿನ ತಲಕಾವೇರಿಗೆ ತಲುಪಿ ಈ ಪವಿತ್ರ ಕ್ಷಣಗಳನ್ನು ಕಣ್ತುಂಬಿಕೊಳ್ಳುತ್ತಾರೆ. ತೀರ್ಥ ರೂಪದಲ್ಲಿ ದರುಶನ ಕೊಡುವ ಕಾವೇರಿ ತಾಯಿಯ ದರ್ಶನ ಪಡೆದುಕೊಳ್ಳುತ್ತಾರೆ. ಕಾವೇರಿ ನದಿಯಲ್ಲಿ ಮಿಂದು ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸುತ್ತಾರೆ. ಕೊಡಗು ಜಿಲ್ಲೆ ಸೇರಿ ಹೊರ ಜಿಲ್ಲೆಯಲ್ಲಿರುವ ಕೊಡವರು ಕೂಡ ಆ ದಿನ ಸಮಾನ್ಯವಾಗಿ ಅಲ್ಲಿಗೆ ತೆರಳುತ್ತಾರೆ. ಆದರೆ ನಾನಾ ಕಾರಣಗಳಿಂದ ಕೆಲವರು ತಲಕಾವೇರಿಗೆ ಹೋಗಲು ಸಾಧ್ಯವಾಗಿರುವುದಿಲ್ಲ. ಅದಕ್ಕಾಗಿ ಅಲ್ಲಿಂದ ತೀರ್ಥವನ್ನು ತಂದು ಕೊಡವ ಸಮಾಜದಲ್ಲಿ ಪೂಜೆ ಸಲ್ಲಿಸಿ ಮನೆಮನೆಗೆ ವಿತರಿಸಲಾಗುತ್ತಿದೆ ಎಂದು ಹೇಳಿದರು.
ನಮ್ಮ ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಇರುವ ಕೊಡವರು ಬಂದು ಕಾವೇರಿ ತೀರ್ಥವನ್ನು ಮನೆಗೆ ಒಯ್ಯುತ್ತಾರೆ ಮನೆಯಲ್ಲಿ ಪೂಜೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net