

ಮಡಿಕೇರಿ:
ಪ್ರತಿವರ್ಷದಂತೆ ಈ ವರ್ಷವೂ ಬಾಳೆಲೆ ಹೋಬಳಿ ವ್ಯಾಪ್ತಿಯ ನಿಟ್ಟೂರು ಕಾರ್ಮಾಡು ಮತ್ತು ಬಾಳೆಲೆ ಪಟ್ಟಣದಲ್ಲಿ ಕಾವೇರಿ ತೀರ್ಥ ವಿತರಣಾ ಸಮಿತಿ ವತಿಯಿಂದ ಗುರುವಾರ ಮತ್ತು ಶುಕ್ರವಾರ ಪವಿತ್ರ ಕಾವೇರಿ ತೀರ್ಥ ವಿತರಣಾ ಕಾರ್ಯ ನಡೆಯಿತು. ಗ್ರಾಮಸ್ಥರು ಶ್ರದ್ಧಾ, ಭಕ್ತಿಯಿಂದ ಮಾತೆ ಕಾವೇರಿಯ ತೀರ್ಥ ಸ್ವೀಕರಿಸಿದರು.
ಈ ವೇಳೆ ಮಾತನಾಡಿದ ಸಮಿತಿಯ ಸಂಚಾಲಕÀ ಕಾಟಿಮಾಡ ಶರೀನ್ ಮುತ್ತಣ್ಣ, ಈ ಬಾರಿ ಬಾಳೆಲೆ ಹೊಬಳಿ ವ್ಯಾಪ್ತಿಯ ಸಾವಿರಕ್ಕೂ ಹೆಚ್ಚು ಮಂದಿಗೆ ತೀರ್ಥ ವಿತರಣೆ ಮಾಡಲಾಗಿದೆ. ಈ ದಾರ್ಮಿಕ ಕಾರ್ಯ ಸಂತೃಪ್ತಿ ತಂದಿದೆ ಎಂದರು. ಮಲ್ಲೆಂಗಡ ಶಶಿಮಣಿ, ಮುಕ್ಕಾಟಿರ ರೋಷನ್, ಚೀರಂಡ ಜನಿತ್, ಕಾಟಿಮಾಡ ಪೊನ್ನಣ್ಣ, ಮಖೇಶ್ ಮತ್ತಿತರರು ತೀರ್ಥ ವಿತರಣಾ ಕಾರ್ಯದಲ್ಲಿ ಭಾಗವಹಿಸಿದ್ದರು.