ಕುಟುಂಬಶ್ರೀಯಿಂದ ಕರ್ಕಾಟಕ ಗಂಜಿ ವಿತರಣೆ

New Project (12)
Published on

ಕಾಸರಗೋಡು: ಕರ್ಕಾಟಕ ಮಾಸದಲ್ಲಿ ಆರೋಗ್ಯದಾಯಕ ಆಹಾರ ತಯಾರಿ ಬಗ್ಗೆ ಜನರಿಗೆ ಮಾಹಿತಿ ನೀಡುವಲ್ಲಿ ಕುಟುಂಬಶ್ರೀ ಕಾರ್ಯಕರ್ತರು ಮುಂದಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ತಿಳಿಸಿದರು.

ಕುಟುಂಬಶ್ರೀ ಜಿಲ್ಲಾ ಮಿಷನ್ ನೇತೃತ್ವದಲ್ಲಿ ಕಾಸರಗೋಡು ಸಿವಿಲ್ ಸ್ಟೇಷನ್‌ನಲ್ಲಿ ನಡೆಯುತ್ತಿರುವ ಕರ್ಕಾಟಕ ಮಾಸದಲ್ಲಿ ವಿತರಿಸುವ ಔಷಧೀಯ ಗುಣವುಳ್ಳ ಗಂಜಿ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಯೋಜಕ ಕೆ.ರತೀಶ್ ಕುಮಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಉಪಾಧ್ಯಕ್ಷ ಶಾನವಾಸ್ ಪಾದೂರು, ಮೊಗ್ರಾಲ್ ಪುತ್ತೂರು ಗ್ರಾಪಂ ಅಧ್ಯಕ್ಷೆ ಟಿ.ಕೆ.ಶಮೀನಾ ಅವರಿಗೆ ಔಷಧೀಯ ಗಂಜಿ ಹಸ್ತಾಂತರಿಸುವ ಮೂಲಕ ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಯೋಜಕ ಕೆ.ರತೀಶ್ ಕುಮಾರ್ ಪ್ರಥಮ ಮಾರಾಟವನ್ನು ನಡೆಸಿಕೊಟ್ಟರು. ಕುಟುಂಬಶ್ರೀ ಜಿಲ್ಲಾ ಸಹಾಯಕ ಮಿಷನ್ ಸಂಯೋಜಕ ಸಿ.ಎಚ್.ಇಕ್ಬಾಲ್, ಸಿಡಿಎಸ್ ಅಧ್ಯಕ್ಷರಾದ ಮುವ್ತಾಜ್ ಅಬೂಬಕರ್, ಸುನೀತಾ, ಪಿ.ಕೆ.ಕದೀಜಾ, ಸುಮಾ, ಕುಟುಂಬಶ್ರೀ ಜಿಲ್ಲಾ ಕಾರ್ಯಕ್ರಮ ಸಂಚಾಲಕ ಕೆ.ಟಿ.ಜಿತಿನ್ ಉಪಸ್ಥಿತರಿದ್ದರು. ಕುಟುಂಬಶ್ರೀ ಎಡಿಎಂಸಿ ಡಿ.ಹರಿದಾಸ್ ಸ್ವಾಗತಿಸಿದರು. ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕಿ ಟಿ.ಪಿ. ಆದಿರಾ ವಂದಿಸಿದರು. ಕರ್ಕಾಟಕ ಗಂಜಿ ಉತ್ಸವ ಜುಲೈ 26ರವರೆಗೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net