ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ

Distribution of incentive funds to students
ತೇರದಾಳ ತಾಲೂಕಿನ ಕಾಲತಿಪ್ಪಿ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದ ಕಚೇರಿಯಲ್ಲಿ ಪದವಿ ವಿದ್ಯಾರ್ಥಿಗೆ ನೀಡುವ ಪ್ರೋತ್ಸಾಹ ಧನದ ಚೆಕ್‌ನ್ನು ಜಿಲ್ಲಾ ಕೆಎಂಎ್ ನಿರ್ದೇಶಕ ಲಕ್ಕಪ್ಪ ಪಾಟೀಲ ವಿತರಿಸಿದರು. ರಾಮಪ್ಪ ಪಾಟೀಲ, ಆನಂದ ಜಮಖಂಡಿ, ಚನ್ನಪ್ಪ ಲಟ್ಟಿ, ರೇಳೇಕರ, ಬಸವರಾಜ ವಡರಟ್ಟಿ, ಶಿವಾನಂದ ಸನದಿ ಮತ್ತಿತರರಿದ್ದಾರೆ.
Published on

ತೇರದಾಳ: ಶಿಕ್ಷಣ ಬದುಕಿನ ಅಸ್ತ್ರವಾಗಿದ್ದು, ದಿನೇ ದಿನೆ ಸಾಕಷ್ಟು ಪ್ರಾಮುಖ್ಯತೆ ಪಡೆಯುತ್ತಿದೆ ಎಂದು ಜಿಲ್ಲಾ ಕೆಎಂಎ್ ನಿರ್ದೇಶಕ ಲಕ್ಕಪ್ಪ ಪಾಟೀಲ ಗೋಲಭಾವಿ ಹೇಳಿದರು.

ತಾಲೂಕಿನ ಕಾಲತಿಪ್ಪಿ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದ ಕಚೇರಿಯಲ್ಲಿ ಇತ್ತೀಚೆಗೆ ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘದ ರೈತ ಕಲ್ಯಾಣ ನಿಧಿಯಡಿ ಪದವಿ ಶಿಕ್ಷಣ ಪಡೆಯುತ್ತಿರುವ ಹಾಲು ಉತ್ಪಾದಕ ಸಂಘದ ರೈತರ ಮಕ್ಕಳಿಗೆ ಪ್ರೋತ್ಸಾಹ ಧನ ಚೆಕ್ ವಿತರಿಸಿ ಮಾತನಾಡಿದ ಅವರು, ರೈತರ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕು ಎಂಬ ಉದ್ದೇಶದಿಂದ ತಲಾ 15 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ. ತೇರದಾಳ ಕ್ಷೇತ್ರದಲ್ಲಿ 45 ಲಾನುಭವಿಗಳು ಆಯ್ಕೆಯಾಗಿದ್ದು, ಆಯಾ ಹಾಲು ಉತ್ಪಾದಕರ ಸಂಘಗಳಿಗೆ ನೀಡಿ ಲಾನುಭವಿಗಳಿಗೆ ವಿತರಿಸುವ ಕ್ರಮ ಕೈಗೊಳ್ಳಲಾಗಿದೆ ಎಂದರು.

ರಾಮಪ್ಪ ಪಾಟೀಲ, ಆನಂದ ಜಮಖಂಡಿ, ಚನ್ನಪ್ಪ ಲಟ್ಟಿ, ರೇಳೇಕರ, ಬಸವರಾಜ ವಡರಟ್ಟಿ, ಶಿವಾನಂದ ಸನದಿ, ಶ್ರೀಶೈಲ ರೆಡ್ಡಿ, ರಾಮಪ್ಪ ಕರಿಗಾರ, ವಿಠ್ಠಲ ಸನದಿ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net