ಗುರಿ ಇಟ್ಟುಕೊಟ್ಟು ಸಾಧನೆ ಮಾಡಿ: ಸಕ್ಕರೆನಾಡು ಲಯನ್ಸ್ ಕ್ಲಬ್ ಉಪಾಧ್ಯಕ್ಷ ಮುದ್ದುಂಗೆರೆ ಮಹಾಲಿಂಗು ಕಿವಿಮಾತು

Distribution of identity card to students Mandya
Published on

ಮಂಡ್ಯ: ಇತ್ತೀಚೆಗೆ ಸರ್ಕಾರ, ಪಾಲಕರ ಜತೆಗೆ ಸಂಘ ಸಂಸ್ಥೆ, ದಾನಿಗಳು ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸುತ್ತಿದ್ದಾರೆ. ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಂಡು ಸಾಧಕರಾಗಬೇಕು ಎಂದು ಸಕ್ಕರೆನಾಡು ಲಯನ್ಸ್ ಕ್ಲಬ್ ಉಪಾಧ್ಯಕ್ಷ ಮುದ್ದುಂಗೆರೆ ಮಹಾಲಿಂಗು ಹೇಳಿದರು.

ತಾಲೂಕಿನ ಈಚಗೆರೆ ಹಾಗೂ ಜೋಡಿ ಹೊಡಾಘಟ್ಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಗುರುತಿನ ಕಾರ್ಡ್, ಟೈ ಮತ್ತು ಬೆಲ್ಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಉನ್ನತ ಗುರಿ ಇಟ್ಟು ನಿಯಮಿತ ಕಾರ್ಯ ಯೋಜನೆ ತಯಾರಿಸಿ ಅಭ್ಯಾಸ ಮಾಡಿದರೆ ನೀವು ಕಂಡ ಕನಸು ನನಸು ಮಾಡಬಹುದು. ಶಿಕ್ಷಕರ ಸೂಕ್ತ ಮಾರ್ಗದರ್ಶನದಿಂದ ಭವಿಷ್ಯ ಕಟ್ಟುಕೊಳ್ಳಿರಿ ಎಂದರು.

ಶಿಕ್ಷಕರಾದ ಕೆ.ಆರ್.ಶಶಿಧರ ಈಚಗೆರೆ, ಎಸ್.ಎಚ್.ಮುತ್ತುರಾಜು, ಲಕ್ಷ್ಮೀ, ಮನುತಾ, ಜರೀನಾ, ಪಾಲಕರಾದ ರಾಮಕೃಷ್ಣ, ರಾಜು, ಅಡುಗೆ ಸಿಬ್ಬಂದಿ ಮಂಗಳಾ, ಭಾಗ್ಯಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net