ಮೀನುಗಾರರಿಗೆ ಐಸ್‌ಬಾಕ್ಸ್, ಕ್ರೇಟ್ ವಿತರಣೆ

26spt1
ಸೋಮವಾರಪೇಟೆ ಮೀನುಗಾರಿಕಾ ಇಲಾಖೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರಿಶಿಷ್ಟ ಪಂಗಡದ ಮೀನುಗಾರರಿಗೆ ಐಸ್ ಬಾಕ್ಸ್ ಮತ್ತು ಕ್ರೇಟ್‌ಗಳನ್ನು ಈಚೆಗೆ ವಿತರಿಸಲಾಯಿತು. ಪರಮೇಶ್, ಮಿಲನಾ, ಪ್ರೀತಾ, ಮಹಮ್ಮದ್ ಇದ್ದರು.
Published on

ಸೋಮವಾರಪೇಟೆ: ಮೀನುಗಾರಿಕೆ ಇಲಾಖೆ, ಬೆಂಗಳೂರಿನ ಐಸಿಎಆರ್ ಒಳನಾಡು ಮೀನುಗಾರಿಕೆ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಪರಿಶಿಷ್ಟ ಪಂಗಡದ ಮೀನುಗಾರರಿಗೆ ಐಸ್‌ಬಾಕ್ಸ್ ಮತ್ತು ಕ್ರೇಟ್‌ಗಳನ್ನು ಇತ್ತೀಚೆಗೆ ವಿತರಿಸಲಾಯಿತು.
ಗಿರಿಜನ ಉಪಯೋಜನೆ ಅಡಿಯಲ್ಲಿ ಜಲಾಶಯಗಳಲ್ಲಿ ಹಿಡಿಯುವ ಮೀನುಗಳು ತಾಜಾ ಮತ್ತು ಗುಣಮಟ್ಟದಲ್ಲಿ ಗ್ರಾಹಕರನ್ನು ತಲುಪಬೇಕು ಎನ್ನುವ ಉದ್ದೇಶದಿಂದ ಕ್ರೇಟ್ ಮತ್ತು ಐಸ್ ಬಾಕ್ಸ್‌ಗಳನ್ನು ವಿತರಿಸಲಾಗಿದೆ ಎಂದು ಮೀನುಗಾರಿಕೆ ಸಹಾಯಕ ನಿರ್ದೇಶಕರಾದ ಮಿಲನಾ ಭರತ್ ಹೇಳಿದರು.
ಸೋಮವಾರಪೇಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪರಮೇಶ ಕುಮಾರ್ ಮೀನುಗಾರರು ಹೊಂದಬಹುದಾದ ಕೌಶಲಾಭಿವೃದ್ಧಿ, ಜಲಾಶಯಗಳಲ್ಲಿ ಮೀನುಗಾರಿಕೆ ಅಭಿವೃದ್ಧಿಯ ಕುರಿತು ಮಾತನಾಡಿದರು.

ಸಂಶೋಧನಾ ಕೇಂದ್ರದ ಮುಖ್ಯ ವಿಜ್ಞಾನಿಗಳಾದ ಡಾ.ಪ್ರೀತಾ ಪಣಿಕ್ಕರ್, ವಿಜ್ಞಾನಿಗಳಾದ ಡಾ.ರಮ್ಯಾ, ಜೇಷ್ನಾ, ಶ್ರೀ ಕಾವೇರಿ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಮಹಮ್ಮದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net