ಮಡಿಕೇರಿ : ಕುಶಾಲನಗರದ ಇನ್ನರ್ ವ್ಹೀಲ್ ಕ್ಲಬ್ ಸದಸ್ಯರು ಕ್ಲಬ್ ಅಧ್ಯಕ್ಷೆ ನೇಹಾ ಜಗದೀಶ್ ನೇತೃತ್ವದಲ್ಲಿ ಶನಿವಾರ ರೋಟರಿ ಕ್ಲಬ್ ಆವರಣದಲ್ಲಿ ಮಂಗಳಮುಖಿಯರಿಗೆ ದಿನಸಿ ಕಿಟ್, ಸೀರೆ ಮತ್ತು ಹಣ ಹಂಚುವ ಮೂಲಕ ಕ್ಲಬ್‌ನ ಶತಮಾನೋತ್ಸವವನ್ನು ಆಚರಿಸಿದರು.
ಅಗತ್ಯ ಇರುವವರಿಗೆ ಅವಶ್ಯವಿರುವುದನ್ನು ನೀಡಿ ಅವರಲ್ಲಿ ಸಂತೃಪ್ತ ಭಾವನೆ ಮೂಡಿಸುವ ಉದ್ದೇಶ ನಮ್ಮದಾಗಿದೆ. ಕ್ಲಬ್‌ನಿಂದ ಸಾಕಷ್ಟು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಶತಮಾನೋತ್ಸವ ಸಂದರ್ಭದಲ್ಲಿ ಮಂಗಳಮುಖಿಯರಿಗೆ ಗೌರವ ಪೂರ್ವಕವಾಗಿ ಸೀರೆ, ಹಣ, ದಿನಸಿ ಕಿಟ್‌ಗಳನ್ನು ನೀಡುತ್ತಿರುವುದು ಸಂತಸದ ವಿಚಾರ. ಅವರೊಂದಿಗೆ ಸಂಕ್ರಾಂತಿ ಸಂಭ್ರಮ ಹಂಚಿಕೊಂಡಿದ್ದೇವೆ ಎಂದು ಕ್ಲಬ್ ಅಧ್ಯಕ್ಷೆ ನೇಹಾ ಜಗದೀಶ್ ತಿಳಿಸಿದರು.
ಇದೇ ವೇಳೆ ಆಯ್ದ 55 ವಿದ್ಯಾರ್ಥಿಗಳಿಗೆ ಪೆನ್, ಪುಸ್ತಕ, ಪೆನ್ಸಿಲ್, ಲೇಖನಿ ಸಾಮಗ್ರಿಗಳನ್ನು ಉಚಿತವಾಗಿ ನೀಡಲಾಯಿತು. ಕ್ಲಬ್ ಸದಸ್ಯರು ಸಿಹಿ ಹಂಚಿ ಸಂಭ್ರಮಿಸಿದರು. ಇನ್ನರ್ ವ್ಹೀಲ್ ಕ್ಲಬ್‌ನ ಕುಶಾಲನಗರ ಘಟಕದ ಕಾರ್ಯದರ್ಶಿ ಜಾಸ್ಮಿನ್, ಖಜಾಂಚಿ ಸುಪ್ರೀತಾ, ಉಪಾಧ್ಯಕ್ಷೆ ಚಿತ್ರಾ, ಕ್ಲಬ್ ಎಡಿಟರ್ ಸಂಧ್ಯಾ, ಪಿಆರ್‌ಒ ದೀಪಾ, ಮಾಜಿ ಅಧ್ಯಕ್ಷರಾದ ರೂಪಾ, ಸುನೀತಾ, ಕವಿತಾ ಮತ್ತಿತರರಿದ್ದರು.