ಗುತ್ತಲದ 6 ಸರ್ಕಾರಿ ಶಾಲೆಗೆ ಹರ ಪತ್ತಿನ ಸಂಘದಿಂದ ಗಾಡ್ರೇಜ್ ವಿತರಣೆ

HARA PATTINA SAHAKARI SANGH GUTTAL
Published on

ಗುತ್ತಲ: ಪಟ್ಟಣದ ಹರ ಸೌಹಾರ್ದ ಪತ್ತಿನ ಸಹಕಾರಿ ಸಂಘದ ದಶಮಾನೋತ್ಸವ ಹಾಗೂ ಸ್ವಾತಂತ್ರ್ಯೊತ್ಸವ ಅಂಗವಾಗಿ 6 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಗಾಡ್ರೇಜ್​ಗಳನ್ನು ವಿತರಣೆ ಮಾಡಲಾಯಿತು.

ಹರ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಈಶ್ವರ ನಂದಿ ಮಾತನಾಡಿ, ಶಾಲೆಗಳು ನಮ್ಮ ಭವಿಷ್ಯ ರೂಪಿಸಿ ಬದುಕು ಕಟ್ಟಿಕೊಟ್ಟಿವೆ. ಕಲಿತ ಶಾಲೆ ಹಾಗೂ ಕಲಿಸಿದ ಗುರುಗಳಿಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬ ವಿದ್ಯಾರ್ಥಿಗಳ ಕರ್ತವ್ಯವಾಗಿದೆ. ಇಂತಹ ಅಳಿಲು ಸೇವೆ ಮಾಡುವ ಅವಕಾಶ ನಮ್ಮದಾಗಿದೆ. ಸಂಘದ ಸದಸ್ಯರ ಧರ್ವರ್ಥ ನಿಧಿಯಿಂದ ಸಂಗ್ರಹಿಸಿದ ಹಣವನ್ನು ಸದುಪಯೋಗ ಪಡಿಸಲು ಆಡಳಿತ ಮಂಡಳಿಯೊಂದಿಗೆ ನಿರ್ಧರಿಸಿ ಗಾಡ್ರೇಜ್​ಗಳನ್ನು ನೀಡಲಾಗಿದೆ ಎಂದರು.

ಸಂಘದ ನಿರ್ದೇಶಕ ಈರಣ್ಣ ಕೆಂಚಮಲ್ಲ ಮಾತನಾಡಿ, ಪಟ್ಟಣದ ಜನತೆಯ ಸಹಕಾರದೊಂದಿಗೆ ಸಂಘವು ಉತ್ತಮ ಆಡಳಿತ ಹಾಗೂ ಆರ್ಥಿಕ ಮಟ್ಟವನ್ನು ತಲುಪಿದೆ. ನಮ್ಮೂರಿನ ನಾವು ಕಲಿತ ಶಾಲೆಗಳಿಗೆ ಗಾಡ್ರೇಜ್ ನೀಡಿರುವದು ಖುಷಿಯಾಗಿದೆ ಎಂದರು.

ಹರ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಬಸವರಾಜ ಚಂದಾಪುರ, ನಿರ್ದೇಶಕರಾದ ಪರಮೇಶಪ್ಪ ಕುರುವತ್ತಿಗೌಡ್ರ, ಗುಡ್ಡಪ್ಪ ತರ್ಲಿ, ಶಿವಾನಂದ ಕೆಂಚಮಲ್ಲ, ಮಾಲತೇಶ ಬನ್ನಿಮಟ್ಟಿ, ಶಿವಾನಂದ ನಂದಿಗೊಣ್ಣ, ಶಿವಕುಮಾರ ಬೆನ್ನೂರ, ಪುಷ್ಪಾ ಹಾದಿಮನಿ, ಗೌರಮ್ಮ ಆರೇಮಲ್ಲಾಪುರ, ಸಂಘದ ವ್ಯವಸ್ಥಾಪಕ ಬಸವರಾಜ ಕೆಂಚಮಲ್ಲ, ಸಿಬ್ಬಂದಿ ಚಂದ್ರಶೇಖರ ಬನ್ನಿಮಟ್ಟಿ, ರಾಜೇಶ್ವರಿ ಬಳಕೊಪ್ಪ, ಕೊಟ್ರೇಶ ಹೊನ್ನಮ್ಮನವರ, ರಮೇಶ ಬನ್ನಿಮಟ್ಟಿ, ಸುರೇಶ ಭತ್ತದ, ರಾಜಶೇಖರ ಕೆಂಚಮಲ್ಲ, ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರು, ಶಿಕ್ಷಕರು, ಎಸ್​ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net