ಇಪ್ಪತೈದು ಮಹಿಳೆಯರಿಗೆ ಗೌರಿ ಬಾಗಿನ: ಡಾ.ಅನಿಲ್ ಆನಂದ್ ಡ್ರೀಮ್ ವರ್ಕ್ಸ್‌ನಿಂದ ವಿತರಣೆ

Distribution of Gauri Bagina to women Mandya
Published on

ಮಂಡ್ಯ: ಗೌರಿ ಹಬ್ಬದ ಅಂಗವಾಗಿ ಡಾ.ಅನಿಲ್ ಆನಂದ್ ಡ್ರೀಮ್ ವರ್ಕ್ಸ್‌ನಿಂದ ನಗರದ ವಿವಿಧೆಡೆ ಬಾಗಿನ ವಿತರಣೆ ಮಾಡಿದರು.

ನರರೋಗ ಮತ್ತು ಮಾನಸಿಕ ತಜ್ಞ ಡಾ.ಅನಿಲ್ ಆನಂದ್ ಹಾಗೂ ಸ್ತ್ರೀರೋಗ ತಜ್ಞೆ ಡಾ.ಯಾಶಿಕಾ ಅನಿಲ್ ಅವರು ಮಹಿಳೆಯರಿಗೆ ಸೀರೆ, ಅರಿಶಿನ-ಕುಂಕುಮ, ಬಳೆ ನೀಡಿ ಹಬ್ಬದ ಶುಭಾಶಯ ತಿಳಿಸಿದರು. ಗೌರಿ-ಗಣೇಶ ಹಬ್ಬ ನಮ್ಮ ಸಂಸ್ಕೃತಿಯ ಸಂಕೇತ. ಗೌರಿ ಹಬ್ಬ ಹೆಣ್ಣು ಮಕ್ಕಳ ಹಬ್ಬವಾಗಿರುವುದರಿಂದ ಬಾಗಿನ ನೀಡಲಾಗುತ್ತಿದೆ. ಈ ಪ್ರಕ್ರಿಯೆ ಮಹಿಳೆಯರಿಗೆ ನಾವು ನೀಡುವ ಗೌರವವಾಗಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net