ಶಿವನ ದೇವಾಲಯಗಳಿಗೆ ಗಂಗಾಜಲ ವಿತರಣೆ

ಅರಸೀಕೆರೆ ತಾಲೂಕಿನ ಎಲ್ಲ ಶಿವ ದೇವಾಲಯಗಳಿಗೆ ಗಂಗಾ ಜಲ ವಿತರಿಸಲಾಯಿತು. ಈ ಸಂದರ್ಭದಲ್ಲಿ ತಾಹಸಿಲ್ದಾರ್ ಸಂತೋಷ್ ಕುಮಾರ್, ಪಾಲಾಕ್ಷ, ಸೋಮಶೇಖರ್, ನಾಗರತ್ನ, ಮಂಜುನಾಥ್, ನಿಖಿಲ್ ಇದ್ದರು.
ಅರಸೀಕೆರೆ ತಾಲೂಕಿನ ಎಲ್ಲ ಶಿವ ದೇವಾಲಯಗಳಿಗೆ ಗಂಗಾ ಜಲ ವಿತರಿಸಲಾಯಿತು. ಈ ಸಂದರ್ಭದಲ್ಲಿ ತಾಹಸಿಲ್ದಾರ್ ಸಂತೋಷ್ ಕುಮಾರ್, ಪಾಲಾಕ್ಷ, ಸೋಮಶೇಖರ್, ನಾಗರತ್ನ, ಮಂಜುನಾಥ್, ನಿಖಿಲ್ ಇದ್ದರು.
Published on

ಅರಸೀಕೆರೆ ಗ್ರಾಮಾಂತರ: ತಾಲೂಕಿನ ವಿವಿಧ ಭಾಗಗಳಲ್ಲಿರುವ ಶಿವನ ದೇವಾಲಯಗಳಿಗೆ ಮುಜರಾಯಿ ಇಲಾಖೆಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಅರ್ಚಕರಿಗೆ ಗಂಗಾಜಲ ವಿತರಿಸಲಾಯಿತು.

ತಾಲೂಕಿನ ಸುಮಾರು 300ಕ್ಕೂ ಹೆಚ್ಚು ಶಿವ ದೇವಾಲಯಗಳ ಅರ್ಚಕರಿಗೆ ಗಂಗಾಜಲ ವಿತರಿಸಿದ ತಹಸೀಲ್ದಾರ್ ಎಂ.ಜಿ. ಸಂತೋಷ್ ಕುಮಾರ್ ಮಾತನಾಡಿ, ಮಹಾ ಶಿವರಾತ್ರಿ ಹಬ್ಬವು ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿದೆ. ಅವುಗಳಲ್ಲಿ 145 ವರ್ಷಗಳಿಗೊಮ್ಮೆ ನಡೆಯುವ ಪ್ರಯಾಗ್‌ರಾಜ್ ಕುಂಭಮೇಳ ಸವಿನೆನಪು ಸೇರಿದಂತೆ ಈ ಬಾರಿಯ ಮಹಾ ಶಿವರಾತ್ರಿಗೆ ಗಂಗಾಜಲ ವಿತರಿಸಲಾಗುತ್ತಿದೆ. ಹಲವಾರು ವರ್ಷಗಳಿಂದ ರಾಜ್ಯದ ಸಾವಿರಾರು ಶಿವಾಲಯಗಳಿಗೆ ಗಂಗಾಜಲ ವಿತರಿಸಲಾಗುತ್ತಿದೆ. ಶಿವರಾತ್ರಿ ಆಚರಣೆ ನಮ್ಮ ಇಷ್ಟಾರ್ಥಗಳನ್ನು ಈಡೇರಿಸುವ ಹಬ್ಬವಾಗಿದ್ದು, ಈ ಹಬ್ಬದಲ್ಲಿ ಪ್ರಾರ್ಥನೆ ಮೂಲಕ ನಾಡು ಸಭೀಕ್ಷವಾಗಿರಲಿ, ಮಳೆ, ಬೆಳೆ ಸಮೃದ್ಧಿಯಾಗಿ ಜೀವ ಸಂಕುಲಗಳು ನೆಮ್ಮದಿ ಜೀವನ ನಡೆಸಲಿ ಎಂದು ಎಲ್ಲರೂ ಪ್ರಾರ್ಥಿಸೋಣ ಎಂದರು.

ತಹಸೀಲ್ದಾರ್ ಗ್ರೇಡ್-2 ಪಾಲಾಕ್ಷ, ಶಿರಸ್ತೇದಾರ್ ಶಿವಶಂಕರ್, ಸೋಮಶೇಖರ್, ಮುಜರಾಯಿ ಇಲಾಖೆ ಅಧಿಕಾರಿ ನಾಗರತ್ನ, ಮಂಜುನಾಥ್, ನಿಖಿಲ್ ಸೇರಿದಂತೆ ತಾಲೂಕಿನ ವಿವಿಧ ಶಿವ ದೇವಾಲಯಗಳ ಅರ್ಚಕರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net