

ಅರಸೀಕೆರೆ ಗ್ರಾಮಾಂತರ: ತಾಲೂಕಿನ ಬಾಣಾವರ ಹೋಬಳಿ ಚಿಕ್ಕೊರು, ಹಿರಿಯೂರು, ಬಿಸಿಲೇಹಳ್ಳಿ, ಲಾಯಲಾಪುರ ಗ್ರಾಮಗಳ ರೈತರಿಗೆ ಲಕ್ಷ್ಮೀಪುರದಲ್ಲಿರುವ ಆದಿಚುಂಚನಗಿರಿ ಆಂಗ್ಲ ಶಾಲೆ ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ ಹಣ್ಣಿನ ಸಸಿಗಳನ್ನು ವಿತರಿಸಲಾಯಿತು
ಮುಖ್ಯ ಶಿಕ್ಷಕಿ ಜ್ಞಾನೇಶ್ವರಿ ಮಾತನಾಡಿ, ಪರಿಸರವನ್ನು ನಾವು ಉತ್ತಮವಾಗಿ ಕಾಪಾಡಿಕೊಳ್ಳಬೇಕು. ಹಣ್ಣಿನ ಸಸಿಗಳನ್ನು ನಾವು ಪೋಷಿಸಿದರೆ ಅವು ನಮಗೆ ಆಹಾರ ನೀಡುತ್ತವೆ. ಆದ್ದರಿಂದ ಗಿಡಗಳನ್ನು ಬೆಳೆಸಬೇಕು ಎಂದರು. ಗ್ರಾಮಗಳಿಗೆ ಭೇಟಿ ನೀಡಿ ಹಣ್ಣಿನ ಸಸಿಗಳನ್ನು ವಿತರಿಸಲಾಯಿತು.
ಶಾಲೆಯ ಆವರಣದಲ್ಲಿ ಮಕ್ಕಳಿಗೆ ಕರಿಬೇವಿನ ಸಸಿಗಳನ್ನು ವಿತರಿಸಿ ಅದರ ಮಹತ್ವ ತಿಳಿಸಿಕೊಡಲಾಯಿತು. ಲಕ್ಷ್ಮೀ, ಜ್ಯೋತಿಲಕ್ಷ್ಮೀ, ಶಕುಂತಲಾ, ದೈಹಿಕ ಶಿಕ್ಷಣ ಶಿಕ್ಷಕ ರವಿ, ದಿವ್ಯಾ, ಸ್ವಾತಿ ಹಾಜರಿದ್ದರು.