

ನರೇಗಲ್ಲ: ಮಾಜಿ ಸಚಿವ ಕಳಕಪ್ಪ ಬಂಡಿ ಜನ್ಮದಿನದ ನಿಮಿತ್ತ ನರೇಗಲ್ಲ ಬಿಜೆಪಿ ಘಟಕ ಹಾಗೂ ಪಪಂ ಸದಸ್ಯರು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿನ ರೋಗಿಗಳಿಗೆ ಹಣ್ಣು, ಬ್ರೇಡ್ ವಿತರಿಸಿದರು.
ರೋಣ ಮಂಡಲ ಅಧ್ಯಕ್ಷ ಮುತ್ತಣ್ಣ ಕಡಗದ ಮಾತನಾಡಿ, ಮಾಜಿ ಸಚಿವ ಕಳಕಪ್ಪ ಬಂಡಿ ಅವರು ರೋಣ ಮತಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಅಪಾರ ಶ್ರಮ ವಹಿಸಿದ್ದಾರೆ. ಅಧಿಕಾರಕ್ಕೆ ಬಂದಾಗ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ. ವಿಶೇಷವಾಗಿ ಶೈಕ್ಷಣಿಕ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದರು.
ಮುಖಂಡರಾದ ಬಿ.ಕೆ. ಪೊಲೀಸ್‌ಪಾಟೀಲ, ಯಲ್ಲಪ್ಪ ಮಣ್ಣೊಡ್ಡರ, ಮಂಜುನಾಥ ಕಮಲಾಪುರ, ಸಂತೋಷ ಕಡೆತೋಟದ, ನಿಂಗಪ್ಪ ಚಲವಾದಿ, ಮಹೇಶ ಶಿವಶಿಂಪರ, ಬಸವರಾಜ ವಂಕಲಕುಂಟಿ, ಮಲ್ಲಿಕಾರ್ಜುನ ಗಂಗರಗೊಂಡ, ಪ.ಪಂ. ಸದಸ್ಯರಾದ ಮಲ್ಲಿಕಾರ್ಜುನ ಭೂಮನಗೌಡ್ರ, ಶ್ರೀಶೈಲಪ್ಪ ಬಂಡಿಹಾಳ, ಫಕೀರಪ್ಪ ಬಂಬ್ಲಾಪುರ, ಫಕೀರಪ್ಪ ಮಳ್ಳಿ, ಮಲ್ಲಿಕಸಾಬ ರೋಣದ, ಈರಪ್ಪ ಜೋಗಿ, ಜ್ಯೋತಿ ಪಾಯಪ್ಪಗೌಡ್ರ, ಮಂಜುಳಾ ಹುರಳಿ ಇದ್ದರು.