

ಹುಬ್ಬಳ್ಳಿ: ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಹುಬ್ಬಳ್ಳಿಯ ಹಳೇ ಹುಬ್ಬಳ್ಳಿಯ ಈಶ್ವರನಗರದ 1 ಅಂಗನವಾಡಿ ಕೇಂದ್ರದಲ್ಲಿ ಬೀಯಿಂಗ್ ಹ್ಯೂಮನ್ಸ್ ಫ್ಯಾನ್ಸ್ ಕ್ಲಬ್ ನೇತೃತ್ವದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಉಚಿತ ಪರೀಕ್ಷಾ ಕಿಟ್ ಅನ್ನು ವಿಎಕೆ ಫೌಂಡೇಷನ್ ಸಂಸ್ಥಾಪಕ ವೆಂಕಟೇಶ ಕಾಟವೆ ಅವರು ವಿತರಿಸಿದರು.
ಪಾಲಿಕೆ ಸದಸ್ಯೆ ಶಿವಗಂಗಾ ಮಾನಶೆಟ್ಟರ್, ಅಂಗನವಾಡಿ ಕಾರ್ಯಕರ್ತೆ ಶಿಲ್ಪಾ ಎಸ್. ಶಿಂಧೆ, ಸಹಾಯಕಿ ಸರಸ್ವತಿ ಪೂಜಾರಿ, ಸಚಿನ್ ಪೂಜಾರಿ, ಶೀಲಾ ಹಿರೇಮಠ, ಮಂಜುಳಾ ಮಂಜಲಾಪುರ, ಸಾವಿತ್ರಿ ಚಿತ್ರಗಾರ, ಮಹೇಂದ್ರ ಮಗಜಿಕೊಂಡಿ, ಭರತ ಮೆಹರವಾಡೆ, ಶ್ರೀಧರ ಕಲ್ಬುರ್ಗಿ, ಅಲ್ತಾಫ್ ಟಾಕೀವಾಲೆ, ಸಂಜಯ ಮೆಹರವಾಡೆ, ಸಚಿನ ಕಾಟವೆ, ಅಮಿತ್ ಇರಕಲ್, ಮಂಜು ಊಟವಾಲೆ, ರಾಹುಲ ಬಂಕಾಪುರ, ಸಂತೋಷ ಕಾಟವೆ ಇತರರು ಉಪಸ್ಥಿತರಿದ್ದರು.