90 ಫಲಾನುಭವಿಗಳಿಗೆ ಉಚಿತ ಕನ್ನಡಕ ವಿತರಣೆ

h14-kle kannadaka
Published on

ಹುಬ್ಬಳ್ಳಿ: ದಿ ಹುಬ್ಬಳ್ಳಿ ಕೋ-ಅಪರೇಟಿವ್ ಆಸ್ಪತ್ರೆ, ಕೆಎಲ್ಇ ಜೆಜಿಎಂಎಂ ಮೆಡಿಕಲ್ ಕಾಲೇಜ್ ವತಿಯಿಂದ ನಗರದ ಶ್ರೀ ಸಿದ್ಧಾರೂಢ ಮಠದ ಆವರಣದಲ್ಲಿ ಕಣ್ಣಿನ ತಪಾಸಣೆ ಮಾಡಿಸಿಕೊಂಡ 90 ಫಲಾನುಭವಿಗಳಿಗೆ ಇತ್ತೀಚೆಗೆ ಉಚಿತವಾಗಿ ಕನ್ನಡ ವಿತರಿಸಲಾಯಿತು.
ಕೆಎಲ್ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ ಮಾತನಾಡಿ, ಆರ್ಥಿಕವಾಗಿ ಹಿಂದುಳಿದವರಿಗೆ ದೃಷ್ಟಿ ಕೊಡುವ ಉದ್ದೇಶ ನಮ್ಮದು. ಹೀಗಾಗಿ ಪ್ರತಿ ತಿಂಗಳು ಮೊದಲ ಸೋಮವಾರ ಹುಬ್ಬಳ್ಳಿ ಕೋ -ಆಪರೇಟಿವ್ ಆಸ್ಪತ್ರೆಯಲ್ಲಿ ಉಚಿತವಾಗಿ ಕಣ್ಣಿನ ತಪಾಸಣೆ ಮಾಡಿ ಅರ್ಹ ಫಲಾನುಭವಿಗಳಿಗೆ ಉಚಿತ ಕನ್ನಡಕ ಅಥವಾ ಕಣ್ಣಿನ ಶಸ್ತ್ರ ಚಿಕಿತ್ಸೆ ಕೂಡ ಮಾಡಲಾಗುವುದು ಎಂದರು.
ಶ್ರೀ ಸಿಧ್ಧಾರೂಡ ಮಠ ಟ್ರಸ್ಟ್ ಕಮಿಟಿ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟರ್ ಮಾತನಾಡಿ, ಇದೇ ರೀತಿಯ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದರೆ, ಶ್ರೀಮಠದಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.
ಕೋ -ಆಪರೇಟಿವ್ ಹಾಸ್ಪಿಟಲ್ ಸೊಸೈಟಿ ಗೌರವ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಮಂಜುನಾಥ ಮುನ್ನವಳ್ಳಿ, ಮಂಜುನಾಥ ಕಾಟಕರ, ಜಿ.ಎಸ್. ನಾಯಕ ಉಪಸ್ಥಿತರಿದ್ದರು. ಪುಂಡಲೀಕ ಅಪ್ಪಿನಬೇಲ್ ನಿರೂಪಿಸಿದರು. ದೀಪಕ ಜಿತೂರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net