ತಂತ್ರಜ್ಞಾನದಿಂದ ಕಲಿಕೆಗೆ ಮುಕ್ತ ಅವಕಾಶ

mkg
Published on

ಹರಿಹರ: ತಂತ್ರಜ್ಞಾನ ಯುಗದಲ್ಲಿ ಕಲಿಕೆಗೆ ಮುಕ್ತ ಅವಕಾಶವಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಹಸೀಲ್ದಾರ್ ಪೃಥ್ವಿ ಸಾನಿಕಂ ಹೇಳಿದರು.

ನಗರದ ಸಾರ್ವಜನಿಕ ಗ್ರಂಥಾಲಯಕ್ಕೆ ಬೆಂಗಳೂರು ಕೃತಘ್ನತಾ ಸಂಸ್ಥೆಯಿಂದ ಉಚಿತವಾಗಿ ನೀಡಿದ ಕಂಪ್ಯೂಟರ್‌ಗಳನ್ನು ಗುರುವಾರ ವಿತರಣೆ ಮಾಡಿ ಮಾತನಾಡಿದರು.

ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳು ಸಾರ್ವಜನಿಕ ಗ್ರಂಥಾಲಯ ಬಳಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆಭ್ಯಾಸ ಮಾಡುತ್ತಾರೆ. ಇಂತಹ ವಿದ್ಯಾರ್ಥಿಗಳಿಗೆ ಗ್ರಂಥಾಲಯ ಡಿಜಿಟಲೀಕರಣ ವರದಾನ ಎಂದರು.

ಉನ್ನತ ಹುದ್ದೆ ವ್ಯಾಸಂಗಕ್ಕೆ ಮತ್ತು ಹೆಚ್ಚಿನ ಜ್ಞಾನ ಹೊಂದಲು ಕಂಪ್ಯೂಟರ್ ಲೈಬ್ರರಿ ಇರುವುದರಿಂದ ಹೆಚ್ಚು ಅನುಕೂಲವಾಗಿದೆ ಎಂದು ಹೇಳಿದರು.

ಜಿಲ್ಲಾ ಮುಖ್ಯ ಗ್ರಂಥಾಲಯ ಅಧಿಕಾರಿ ಪಿ.ಆರ್. ತಿಪ್ಪೇಸ್ವಾಮಿ ಮಾತನಾಡಿ, 1972ರಲ್ಲಿ ಆರಂಭವಾದ ಗ್ರಂಥಾಲಯಗಳು ಇಂದಿನ ತಂತ್ರಜ್ಞಾನಕ್ಕೆ ಹೊಂದಿಕೊಂಡಂತೆ ಉನ್ನತೀಕರಣ ಮಾಡಲಾಗುತ್ತಿದೆ. ಜಿಲ್ಲಾ ಮತ್ತು ನಗರ ಗ್ರಂಥಾಲಯ ಕೇಂದ್ರಗಳಲ್ಲಿ ಈಗಾಗಲೇ ಎರಡು ಕಂಪ್ಯೂಟರ್ ಅಳವಡಿಸಿ ಡಿಜಿಟಲ್ ಗ್ರಂಥಾಲಯಕ್ಕೆ ಚಾಲನೆ ನೀಡಲಾಗಿದೆ ಎಂದರು.

ಪತ್ರಕರ್ತ ಶೇಖರಗೌಡ ಪಾಟೀಲ್, ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಕೆ.ಆರ್. ವಿಶ್ವನಾಥ ಮಾತನಾಡಿದರು.

ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಕೆ. ಭೂಮೇಶ್, ಬಡ್ತಿ ಮು.ಶಿ. ಸಂದ ಅಧ್ಯಕ್ಷ ಬೀರಪ್ಪ, ಶರಣಕುಮಾರ್ ಹೆಗಡೆ, ಮುಸ್ತಾಕ್ ಆಹ್ಮದ್, ಚನ್ನಬಸಪ್ಪ, ಗದಿಗೆಪ್ಪ ವೈ. ಹಳೆಮನಿ, ಟಿ. ಮುಕುಂದಪ್ಪ, ಬಿ.ಎನ್. ವೀರಪ್ಪ, ಡಿ.ಎಂ. ಮಂಜುನಾಥಯ್ಯ, ಈಶಪ್ಪ ಭೂದಿಹಾಳ, ಬಿ.ಬಿ. ರೇವಣ್ಣನಾಯ್ಕ, ರವಿಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net