ಎಕೆಪಿಎ ವತಿಯಿಂದ ರೋಗಿಗಳಿಗೆ ಆಹಾರ ವಿತರಣೆ

food
ಎಕೆಪಿಎ ಸ್ಥಾಪಕ ಕಾರ್ಯದರ್ಶಿ ಸಾರಂಗಪಾಣಿ ಸಂಸ್ಮರಣಾ ದಿನಾಚರಣೆ ಅಂಗವಾಗಿ ಜನರಲ್ ಆಸ್ಪತ್ರೆ ರೋಗಿಗಳಿಗೆ ಆಹಾರ ಪದಾರ್ಥ ವಿತರಿಸಲಾಯಿತು.
Published on

ಕಾಸರಗೋಡು: ಅಖಿಲ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಷನ್(ಎಕೆಪಿಎ) ಕಾಸರಗೋಡು ಪೂರ್ವ ಘಟಕ ಸಮಿತಿ ನೇತೃತ್ವದಲ್ಲಿ ಎಕೆಪಿಎ ಸ್ಥಾಪಕ ಪ್ರಧಾನ ಕಾರ್ಯದರ್ಶಿ ಸಾರಂಗಪಾಣಿ ಸಂಸ್ಮರಣಾ ದಿನಾಚರಣೆ ಕಾಸರಗೋಡಲ್ಲಿ ಜರುಗಿತು.

ಕಾರ್ಯಕ್ರಮದ ಅಂಗವಾಗಿ ಕಾಸರಗೋಡು ತಾಲೂಕು ಜನರಲ್ ಆಸ್ಪತ್ರೆಯ ರೋಗಿಗಳಿಗೆ ಹಾಗೂ ಪರಿಚಾರಕರಿಗೆ ಆಹಾರ ಪದಾರ್ಥ ವಿತರಿಸಲಾಯಿತು. ಪೂರ್ವ ಘಟಕದ ಅಧ್ಯಕ್ಷ ಅಜಿತ್ ಕುಮಾರ್, ಕಾರ್ಯದರ್ಶಿ ಸುಜಿತ್ ಇನ್ಫೋಕಸ್, ಪಿಆರ್‌ಒ ಮನೀಶ್, ರಾಜಶೇಖರ್, ಶ್ರೀಕಾಂತ್, ಅಖಿಲ್ ಮೊದಲಾದವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net