ಶ್ರಮಿಕ ವರ್ಗಕ್ಕೆ ಆಹಾರ ಕಿಟ್ ವಿತರಣೆ

CLK ASAMA vijayvani
Published on

ಚಳ್ಳಕೆರೆ: ವಿಜಯವಾಣಿ ಪತ್ರಿಕೆಯಲ್ಲಿ ಕಸ ಬೇರ್ಪಡಿಸುವವರ ಬದುಕು ಮೂರಾಬಟ್ಟೆ ಶೀರ್ಷಿಕೆಯಡಿ ವರದಿಗೆ ಸ್ಪಂದಿಸಿ, ಕಸ ವಿಲೇವಾರಿ ಘಟಕಕ್ಕೆ ಬುಧವಾರ ಭೇಟಿ ನೀಡಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಶ್ರಮಿಕರಿಗೆ ಆಹಾರದ ಕಿಟ್‌ಗಳನ್ನು ವಿತರಿಸಿದರು.

ಅವರ ಸಮಸ್ಯೆ ಮತ್ತು ಅಗತ್ಯತೆ ಕುರಿತು ಮಾಹಿತಿ ಪಡೆದ ಅಧಿಕಾರಿಗಳು, ಇನ್ನೂ ಹೆಚ್ಚು ನೆರವು ನೀಡಲು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

ಇಲಾಖೆಯ ಅಧಿಕಾರಿ ರಾಮಾಂಜಿನೇಯ, ಹಿರಿಯ ಮೇಲ್ವಿಚಾರಕರಾದ ಜಯಶ್ರೀ ಅವಿನಾಭಾವಿ, ಶಾಂತವೀರಮ್ಮ, ತಿಪ್ಪಮ್ಮ, ವರಲಕ್ಷ್ಮೀ, ಗಿರೀಶ್, ಅಂಜಿನಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net