ಸಂತ್ರಸ್ತರಿಗೆ ಆಹಾರ ಕಿಟ್‌ಗಳ ವಿತರಣೆ

9spt5
ಸೋಮವಾರಪೇಟೆ ಸಮೀಪದ ಚನ್ನಾಪುರ ಗ್ರಾಮದಲ್ಲಿ ಮಳೆ ಹಾನಿಯಿಂದ ಸಂತ್ರಸ್ತರಾದ ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ಕರವೇ ತಾಲೂಕು ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ವಿತರಿಸಿದರು.
Published on

ಸೋಮವಾರಪೇಟೆ: ಬೆಂಗಳೂರಿನ ಆಶಾ ಕಿರಣ ಕಲಾ ಟ್ರಸ್ಟ್ ವತಿಯಿಂದ ಮಳೆಹಾನಿ ಸಂತ್ರಸ್ತರಿಗೆ ಆಹಾರ ಕಿಟ್‌ಗಳನ್ನು ಇತ್ತೀಚೆಗೆ ವಿತರಿಸಲಾಯಿತು.

ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ಅವರು ಮಳೆಯಿಂದ ಬಡವರು ಸಂಕಷ್ಟದಲ್ಲಿರುವ ಬಗ್ಗೆ ಟ್ರಸ್ಟ್ ಅಧ್ಯಕ್ಷರಾದ ಮಾಲತಿ ಅವರಿಗೆ ಮನವಿ ಸಲ್ಲಿಸಿದ ಮೇರೆಗೆ ರಾಮನಳ್ಳಿ, ಎಳನೀರುಗುಂಡಿ, ನಂದಿಗುಂದ, ಬೀಟಿಕಟ್ಟೆ, ಹೊನವಳ್ಳಿ, ಬೀಟಿಕಟ್ಟೆ, ಚನ್ನಾಪುರ, ಶುಂಠಿ ಗ್ರಾಮದ 27 ಕುಟುಂಬಗಳ ಸಂತ್ರಸ್ತರಿಗೆ ಆಹಾರ ಸಾಮಗ್ರಿಗಳ ಕಿಟ್ ಫ್ರಾನ್ಸಿಸ್ ಡಿಸೋಜ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net