

ಗೋಣಿಕೊಪ್ಪ: ಕೈಕೇರಿ ಮತ್ತು ಗೋಣಿಕೊಪ್ಪ ಬ್ಯಾಂಕ್ ಆಫ್ ಬರೋಡಾ ಶಾಖೆ ವತಿಯಿಂದ ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಯೋಜನೆಯಡಿ 40 ಜನರಿಗೆ ಅಗತ್ಯ ವಸ್ತುಗಳ ಕಿಟ್ ವಿತರಿಸಲಾಯಿತು. ಕೈಕೇರಿ ಶಾಖೆ ವ್ಯವಸ್ಥಾಪಕ ಹರೀಶ್ ನಾಯಕ್, ಗೋಣಿಕೊಪ್ಪ ಶಾಖೆ ವ್ಯವಸ್ಥಾಪಕ ಭೂಷಣ್, ಕೃಷಿ ಅಧಿಕಾರಿ ನಾಗರಾಜು, ಸಹಾಯಕ ವ್ಯವಸ್ಥಾಪಕ ತಿರುಮಲೈ, ಗೋಣಿಕೊಪ್ಪ ಗ್ರಾಪಂ ಪಿಡಿಒ ಶ್ರೀನಿವಾಸ್ ಉಪಸ್ಥಿತರಿದ್ದರು.