

ಸೋಮವಾರಪೇಟೆ: ಅಖಿಲ ಕರ್ನಾಟಕ ಹಿಂದು ದೇವಾಲಯಗಳ ಅರ್ಚಕರು, ಆಗಮಿಕರು ಮತ್ತು ಉಪಾದಿವಂತ ಒಕ್ಕೂಟದ ವತಿಯಿಂದ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಒಟ್ಟು 30 ಅರ್ಚಕರಿಗೆ ಮಂಗಳವಾರ ಸೋಮೇಶ್ವರ ದೇವಾಲಯದಲ್ಲಿ ಆಹಾರ ಪದಾರ್ಥಗಳ ಕಿಟ್ ವಿತರಿಸಲಾಯಿತು.
ಒಕ್ಕೂಟದ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಸೂಚನೆಯಂತೆ ಕಿಟ್‌ಗಳನ್ನು ವಿತರಿಸಲಾಗುತ್ತಿದೆ ಎಂದು ಕುಶಾಲನಗರ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಂಜುನಾಥ್ ಗುಂಡೂರಾವ್ ಹೇಳಿದರು.
ದೇವಾಲಯ ಸಮಿತಿ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್, ಕುಶಾಲನಗರ ಬ್ರಾಹ್ಮಣ ಸಮಾಜದ ಅಧ್ಯಕ್ಷ ಪಿ.ಎನ್.ವಿಜೆಯೇಂದ್ರ, ಪ್ರಮುಖರಾದ ರಾಜಶೇಖರ್, ನಾರಾಯಣ್, ಪ್ರದೀಪ್, ರಾಜೀವ್, ಯಡೂರು ಹರೀಶ್, ಶ್ಯಾಮ್‌ಸುಂದರ್, ರಾಜೇಶ್, ರವಿಕುಮಾರ್, ಚಿತ್ರಕುಮಾರ್ ಇದ್ದರು.
ಎನ್-95 ಮಾಸ್ಕ್ ವಿತರಣೆ: ಪಟ್ಟಣದ 1ನೇ ಕುಸೂಬೂರು ಕಾಫಿತೋಟದ ಮಾಲೀಕರಾದ ಡಿ.ಪ್ರೀತಂ ಬಸಪ್ಪ ಅವರು, ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗೆ ಎನ್-95 ಮಾಸ್ಕ್ ಹಾಗೂ ಸ್ಯಾನಿಟೈಸರ್ ನೀಡಿದ್ದು, ಅದನ್ನು ತೋಟದ ವ್ಯವಸ್ಥಾಪಕ ಎಂ.ಸಿ.ಕಿರಣ್ ವಿತರಿಸಿದರು.
ಡಾ.ಶಿವಪ್ರಸಾದ್, ಡಾ.ಸತೀಶ್‌ಕುಮಾರ್, ಹೆಡ್ ನರ್ಸ್ ಕಮಲಾ ಇದ್ದರು.