ಮಹಿಳೆಯರಿಗೆ ಆಹಾರ ಧಾನ್ಯ ಕಿಟ್ ವಿತರಣೆ

h2-holige yantra
Published on

ಹುಬ್ಬಳ್ಳಿ: ಆರ್ಥಿಕವಾಗಿ ಹಿಂದುಳಿದ ಮಹಿಳೆಯರ ಜೀವನೋಪಾಯಕ್ಕಾಗಿ ಮೂರು ತಿಂಗಳು ಉಚಿತ ಹೊಲಿಗೆ ತರಬೇತಿ, ಹೊಲಿಗೆ ಮಿಷನ್ ಹಾಗೂ ಆಹಾರಧಾನ್ಯ ಕಿಟ್ ವಿತರಿಸುವ ಕಾರ್ಯಕ್ರಮವನ್ನು ನಗರದ ಅನಂತನಾಥ ಬಸದಿಯಲ್ಲಿ ಭಾನುವಾರ ಏರ್ಪಡಿಸಲಾಗಿತ್ತು.

ಪದ್ಮಾವತಿ ಮಹಿಳಾ ಮಂಡಳ, ವರ್ಧಮಾನ ಪರಿವಾರ ಸೇವಾ ಟ್ರಸ್ಟ್, ರಾಜಸ್ಥಾನ ಬಿವಡಿ ಸಹಯೋಗದಲ್ಲಿ ನಡೆದ ಕಾರ್ಯಕ್ರಮವನ್ನುಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಶೋಕ ಜೈನ್, ಆಶಾ ಸುದರ್ಶನ ಜೈನ್ ಉದ್ಘಾಟಿಸಿದರು. ಮಹಿಳಾ ಮಂಡಳದ ಅಧ್ಯಕ್ಷೆ ಸುಧಾ ಶಿರಗುಪ್ಪಿ ಅಧ್ಯಕ್ಷತೆ ವಹಿಸಿದ್ದರು.

ಕರ್ನಾಟಕ ಜೈನ್ ಮಹಿಳಾ ಒಕ್ಕೂಟದ ಅಧ್ಯಕ್ಷೆ ಪದ್ಮಾ ಪ್ರಕಾಶ, ವಿಮಲ್ ತಾಳಿಕೋಟಿ, ಮಹೇಶ ಕಾಸ್ಸರ್, ವಿನಾಯಕ ಶೆಟ್ಟಿ, ವಸಂತ ಜೈನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net