ಅನ್ನಸಂತರ್ಪಣೆ, ಮಜ್ಜಿಗೆ, ಪಾನಕ ವಿತರಣೆ

11-KGLPHOTO-1,,,
Published on

ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಸಿಂಗನಲ್ಲೂರು ಗ್ರಾಮದಲ್ಲಿ ಚಾಮರಾಜನಗರ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.


ಗ್ರಾಮದಲ್ಲಿರುವ ಅರಳಿಕಟ್ಟೆ ಬಳಿ ವಿ.ಶ್ರೀನಿವಾಸಪ್ರಸಾದ್ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಿ, ಪುಷ್ಪನಮನ ಅರ್ಪಿಸುವ ಮೂಲಕ ಎರಡು ನಿಮಿಷ ಮೌನ ಆಚರಣೆ ಮಾಡಿದರು. ಬಳಿಕ ಸಾರ್ವಜನಿಕರಿಗೆ ಮಜ್ಜಿಗೆ, ಪಾನಕ ವಿತರಿಸುವ ಜತೆ ಅನ್ನ ಸಂತರ್ಪಣೆ ಮಾಡಿದರು.


ಸಿಂಗನಲ್ಲೂರು ಗ್ರಾಮ ಪಂಚಾಯಿತಿ ಸದಸ್ಯ ಪ್ರಸಾದ್ ಮಾತನಾಡಿ, ಹಳೇ ಮೈಸೂರು ಭಾಗದಲ್ಲಿ ವಿ.ಶ್ರೀನಿವಾಸಪ್ರಸಾದ್ ಪ್ರಬಲ ದಲಿತ ನಾಯಕರಾಗಿದ್ದರು. ಅವರು ಇದೀಗ ನಮ್ಮನ್ನು ಅಗಲಿರುವುದರಿಂದ ತೀವ್ರ ನೋವುಂಟು ಮಾಡಿದೆ ಎಂದರು.


ಶ್ರದ್ಧಾಂಜಲಿ ಸಭೆಯಲ್ಲಿ ಮುಖಂಡ ದೇವರಾಜು, ನಿವೃತ್ತ ಪ್ರಾಂಶುಪಾಲ ಸಿದ್ದರಾಜು, ಸಿದ್ದಮರಿ, ಯಜಮಾನರಾದ ಕೃಷ್ಣ, ಮಹದೇವಯ್ಯ ಪುಟ್ಟಸ್ವಾಮಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net