

ತೇರದಾಳ(ಗ್ರಾ): ಶ್ರೀಶೈಲಕ್ಕೆ ಪಾದಯಾತ್ರೆ ಮೂಲಕ ತೆರಳುವ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಲು ಶುಕ್ರವಾರ ಶ್ರೀ ಶ್ರೀಶೈಲ ಭ್ರಮರಾಂಭ ಮಲ್ಲಿಕಾರ್ಜುನಸ್ವಾಮಿ ಸೇವಾ ಸಂಘದ ವತಿಯಿಂದ ಆಹಾರ ಧಾನ್ಯಗಳನ್ನು ತುಂಬಿಕೊಂಡು ಶ್ರೀಶೈಲ ಕ್ಷೇತ್ರಕ್ಕೆ ಹೊರಟಿರುವ ಎರಡು ವಾಹನಗಳನ್ನು ಬೀಳ್ಕೊಡಲಾಯಿತು.
ಯುಗಾದಿ ಹಬ್ಬದಂದು ಜರುಗಲಿರುವ ಆಂದ್ರಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನನ ಜಾತ್ರೆಗೆ ಆ ಜಾತ್ರೆಯಲ್ಲಿ ಪಾಲ್ಗೊಳ್ಳಲು ತೇರದಾಳ ಹಾಗೂ ಸುತ್ತಮುತ್ತಲಿನ ಸಾಕಷ್ಟು ಭಕ್ತರು ಹೋಳಿ ಹಬ್ಬದ ದಿನದಂದು ಪಾದಯಾತ್ರೆ ಕೈಗೊಂಡು ಯುಗಾದಿ ಮುನ್ನಾ ದಿನ ಶ್ರೀಶೈಲ ಕ್ಷೇತ್ರವನ್ನು ತಲುಪುತ್ತಾರೆ.
ಶನಿವಾರ ಮಧ್ಯಾಹ್ನದಿಂದ ಅನ್ನ ಪ್ರಸಾದವನ್ನು ಪ್ರಾರಂಭಿಸಿದರೆ ಮುಂದೆ ಯುಗಾದಿ ಅಮವಾಸ್ಯೆಯವರೆಗೆ ನಿರಂತರ ಅನ್ನ ಪ್ರಸಾದ ಸೇವೆ ನಡೆಯುವುದು. ಬೆಳಗ್ಗೆ ಮಸಾಲೆ ಅನ್ನ, ಉಪ್ಪಿಟ್ಟು, ಹುಗ್ಗಿ, ಅನ್ನ ಸಾಂಬಾರು ಹಾಗೂ ಕಾಯಿಪಲ್ಯೆಯನ್ನು ಭಕ್ತರಿಗೆ ಉಣಬಡಿಸುವರು. ಬೆಳಗ್ಗೆ 6ಗಂಟೆಗೆ ಪ್ರಸಾದ ಸೇವೆ ಆರಂಭವಾದರೇ ರಾತ್ರಿ 11ಗಂಟೆಯವರೆಗೆ ನಿರಂತರವಾಗಿ ನಡೆಯುತ್ತದೆ ಎಂದು ಮಹೇಶ ಕುಂಚಗನೂರ ಪತ್ರಿಕೆಗೆ ತಿಳಿಸಿದರು.
ಮಹೇಶ ಕುಂಚಗನೂರ, ಮುರಿಗೆಪ್ಪ ಪಾಟೀಲ ಸುಕುಮಾರ ಕೊತ್ತಲಗಿ, ತುಳಜಪ್ಪ ಯಂಡಿಗೇರಿ, ಮಗೆಪ್ಪ ತಾರದಾಳ, ಚನ್ನಪ್ಪ ಚೌಗಲಾ, ಭರಮು ಸಬಸನ್ನವರ, ಸಂತೋಷ ಚಮಕೇರಿ, ವಿಠ್ಠಲ ನೀಲನ್ನವರ, ಪ್ರಜ್ವಲ ಸನ್ನಟ್ಟಿ, ಆನಂದ ಡೊಂಬರ, ಸುಭಾಸ ಪಾಟೀಲ ಮತ್ತಿತರರಿದ್ದರು.