ಅಂಗವಿಕಲ ಮಕ್ಕಳಿಗೆ ಅಗತ್ಯ ಪರಿಕರ ವಿತರಣೆ

19
Published on

ಮೈಸೂರು: ಶ್ರೀರಾಂಪುರದಲ್ಲಿರುವ ನವಚೇತನ ಬಸವೇಶ್ವರ ಟ್ರಸ್ಟ್‌ನಲ್ಲಿರುವ ಅಂಗವಿಕಲ ಮಕ್ಕಳಿಗೆ ಸುಮಾರು 1 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಶುಕ್ರವಾರ ಹಸ್ತಂತರಿಸಲಾಯಿತು.
ಬೆಂಗಳೂರಿನ ಡಾ.ಪ್ರದೀಪ್ ಮತ್ತು ಪೂಜಾ ದಂಪತಿ ಪುತ್ರಿ ಆರಾಧ್ಯಳ ಜನ್ಮ ದಿನದ ಅಂಗವಾಗಿ ನೀಡಿದ ಕೊಡುಗೆಯನ್ನು ಆಶ್ರಮಕ್ಕೆ ಹಸ್ತಾಂತರಿಸಿದ ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಮಾತನಾಡಿ, ಹುಟ್ಟುಹಬ್ಬ ಎಂದರೆ ಮೋಜು ಮಸ್ತಿ ಎನ್ನುವ ಈ ಕಾಲಘಟ್ಟದಲ್ಲಿ ಮಗುವಿನ ಹುಟ್ಟುಹಬ್ಬವನ್ನು ಈ ರೀತಿ ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಎಲ್ಲರು ತಮ್ಮ ಹುಟ್ಟುಹಬ್ಬವನ್ನು ಇಂತಹ ಮಕ್ಕಳೊಂದಿಗೆ ಆಚರಿಸಿ ಎಂದು ಕೋರಿದರು.
ಮೂರು ವರ್ಷಗಳಿಂದ ಇತರ ವಿಶೇಷ ಮಕ್ಕಳ ಶಾಲೆಗಳನ್ನು ಹುಡುಕಿ ಅವರಿಗೆ ಅವಶ್ಯಕತೆ ಇರುವ ವಸ್ತುಗಳನ್ನು ನೀಡಲು ಸಹಕರಿಸುತ್ತಿರುವ ರಂಗನಾಥ ಅವರ ಕಾರ್ಯ ಮೆಚ್ಚುವಂತದ್ದು. ಈ ಕಾರ್ಯಕ್ಕೆ ಬೆಂಬಲ ನೀಡಲು ತಾವೂ ಕೂಡ 50 ಸಾವಿರ ರೂ. ಕೊಡುಗೆಯಾಗಿ ನೀಡುವುದಾಗಿ ಪ್ರಕಟಿಸಿದರು.
ಹೊಯ್ಸಳ ಕರ್ನಾಟಕ ಸಂಘದ ನಿರ್ದೇಶಕ ರಂಗನಾಥ ಮಾತನಾಡಿ, ಡಾ.ಪ್ರದೀಪ್ ದಂಪತಿ ಮಗಳ ಮೊದಲ ವರ್ಷದ ಆಚರಣೆಯನ್ನು ವಿಕಲಚೇತನ ಮಕ್ಕಳಿಗಾಗಿ ಚಾಮುಂಡಿಪುರಂನಲ್ಲಿ ಇರುವ ಅರುಣೋದಯ ವಿಶೇಷ ಮಕ್ಕಳ ಶಾಲೆಯಲ್ಲಿ ಆಚರಿಸಲಾಯಿತು. ಬಳಿಕ ಕಿವುಡ, ಮೂಕರ ಶಾಲೆಯಲ್ಲಿ ನಡೆಯಿತು. ಈಗ ಇಲ್ಲಿ ನಡೆಯುತ್ತಿದ್ದು, ಮಕ್ಕಳಿಗೆ ಅಗತ್ಯ ಇರುವ ವರ್ಷಗಳನ್ನು ನೀಡಿದ್ದಾರೆ ದೆ ಎಂದು ತಿಳಿಸಿದರು.
ಟ್ರಸ್ಟ್ ಅಧ್ಯಕ್ಷ ಮರಿಗೌಡ ಮಾತನಾಡಿ, ನಮ್ಮಲ್ಲಿರುವ ಮಕ್ಕಳಿಗೆ ಊಟ ತಿಂಡಿ ಸೇರಿದಂತೆ ಇನ್ನಿತರ ಸೌಲಭ್ಯ ಕಲ್ಪಿಸಲು ದಾನಿಗಳ ನೆರವು ಬೇಕಿದೆ. ಹಾಗಾಗಿ ಆಸಕ್ತರು ಮೊ. 8861487299 ಅನ್ನು ಸಂಪರ್ಕಿಸುವಂತೆ ಕೋರಿದರು. ಮುಖಂಡರಾದ ಬಸಪ್ಪ, ಸಿದ್ದಣ್ಣ, ಸಿದ್ದರಾಮು, ರಾಮು, ಪ್ರಶಾಂತ್, ಶೇಷ ಪ್ರಸಾದ್, ವಿಕ್ರಂ ಅಯ್ಯಂಗಾರ್, ಪ್ರಕಾಶ್ ಪ್ರಿಯದರ್ಶನ್, ಜಯಂತ್, ಎಸ್. ಎನ್.ರಾಜೇಶ್, ರಾಕೇಶ್, ನಿತಿನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net