ಬಿಬಿಎಂಪಿಯ ರುದ್ರಭೂಮಿ ನೌಕಕರಿಗೆ ಸಲಕರಣೆಗಳ ವಿತರಣೆ

chitagara palike
Published on

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ರುದ್ರಭೂಮಿಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಹಾರೆ, ಪಿಕಾಸಿ ಹಾಗೂ ಬಾಂಡ್ಲಿ ಸಲಕರಣೆಗಳನ್ನು ಸಾಂಕೇತಿಕವಾಗಿ ವಿತರಿಸಿದರು.

ನಗರದಲ್ಲಿರುವ ರುದ್ರಭೂಮಿಗಳಲ್ಲಿನ ಸಿಬ್ಬಂದಿಗಳಿಗೆ ಅನುಕೂಲ ಕಲ್ಪಿಸಲು ಪ್ರಬುದ್ಧ ಡಾ. ಬಿ.ಆರ್. ಅಂಬೇಡ್ಕರ್ ರುದ್ರಭೂಮಿ ಮತ್ತು ವಿದ್ಯುತ್ ಚಿತಾಗಾರ ನೌಕಕರ ಸಂಘವು ಗುರುವಾರ ಪಾಲಿಕೆ ಕೇಂದ್ರ ಕಚೇರಿಯ ಆವರಣದಲ್ಲಿ ನೌಕಕರಿಗೆ ಸಲಕರಣೆಗಳನ್ನು ವಿತರಿಸಲಾಯಿತು.

ನಗರದ ವಿವಿಧೆಡೆಯಿರುವ ಹೆಗಡೆನಗರ, ಅಬ್ಬಿಗೆರೆ, ಕೊಡಿಗೇಹಳ್ಳಿ, ಕೆ.ಆರ್.ಪುರ, ಹೂಡಿ, ಹರಿಚ್ಚಂದ್ರ ಘಾಟ್, ಬ್ಯಾಟರಾಯನಪುರ, ಹೆಬ್ಬಾಳ-ಕೆಂಪಾಪುರ, ಬನಶಂಕರಿ, ಯಲಹಂಕ, ತಿಂಡ್ಲು, ಅಟ್ಟೂರು ಸೇರಿದಂತೆ ಒಟ್ಟು 34 ರುದ್ರಭೂಮಿಗಳಿಗೆ 50 ಹಾರೆಗಳು, 49 ಪಿಕಾಸಿ ಹಾಗೂ 89 ಬಾಂಡ್ಲಿಗಳನ್ನು ನೀಡಲಾಯಿತು.

ಈ ವೇಳೆ ಯೋಜನಾ ವಿಭಾಗದ ವಿಶೇಷ ಆಯುಕ್ತ ಡಾ. ಕೆ.ಹರೀಶ್ ಕುಮಾರ್, ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್, ಸಂಘದ ಅಧ್ಯಕ್ಷ ಆಂಥೋನಿ, ಪ್ರಧಾನ ಕಾರ್ಯದರ್ಶಿ ಸೌರಿ ರಾಜ ಸೇರಿ ಇನ್ನಿತರ ಪದಾಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net