ಅಂಗವಿಕಲ ಮಕ್ಕಳಿಗೆ ಸಾಧನ ಸಲಕರಣೆ ವಿತರಣೆ

7RAM1
Published on

ರಾಮದುರ್ಗ: ಸಮರ್ಥನಂ ಅಂಗವಿಕಲರ ಸಂಸ್ಥೆ, ಎಸ್‌ಬಿಐ ೌಂಡೇಷನ್ ಸಹಯೋಗದೊಂದಿಗೆ ಸಮರ್ಥನಂ ಸಂಸ್ಥೆ ಅಂಗವಿಕಲ ಮಕ್ಕಳಿಗೆ ಕೃತಕ ಕಾಲು, ಗಾಲಿ ಕುರ್ಚಿ,

ಕ್ರಚ್ಚೆಸ್, ವಾಟರ್ ಬೆಡ್ ಮತ್ತು ಏರ್‌ಬೆಡ್ ವಿತರಣೆ ಹಾಗೂ ಅಂಗವಿಕಲ ಸ್ನೇಹಿ ಶೌಚಗೃಹ ನಿರ್ಮಾಣ, ಕೊಠಡಿಗಳ ದುರಸ್ತಿ, ಅಂಗವಿಕಲರಿಗಾಗಿ ರ‌್ಯಾಂಪ್ ವ್ಯವಸ್ಥೆ, ಕಲಿಕಾ ಸಾಮಗ್ರಿ ಮತ್ತು ಸ್ಮಾರ್ಟ್ ಬೋರ್ಡ್‌ಗಳ ಕುರಿತು ಮಾಹಿತಿ ನೀಡಿ, ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅಂಗವಿಕಲ ಸಂಸ್ಥೆ ಶಿಕ್ಷಕ ಅನಿಲ ರಾಥೋಡ ಹೇಳಿದರು.

ಪಟ್ಟಣದ ಭಾಗ್ಯನಗರ ಹಾಗೂ ಖಾನಪೇಠ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮರ್ಥನಂ ಅಂಗವಿಕಲರ ಸಂಸ್ಥೆ ಹಾಗೂ ಎಸ್‌ಬಿಐ ೌಂಡೇಷನ್ ಸಹಯೋಗದಲ್ಲಿ ಅಂಗವಿಕಲ ಮಕ್ಕಳಿಗೆ ಸಾಧನ ಸಲಕರಣೆ ಬುಧವಾರ ವಿತರಿಸಿ ಮಾತನಾಡಿದರು. ಬಿಐಇಆರ್‌ಟಿ ಸಂಸ್ಥೆಯ ಎಸ್.ಎಂ.ಬಡಿಗೇರ ಮಾತನಾಡಿದರು. ಎಸ್.ಬಿ.ಲಮಾಣಿ, ಆರ್.ಡಬ್ಲ್ಯು.ಪರಶುರಾಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net