

ಎನ್.ಆರ್.ಪುರ: ಕಾನೂರು ಗ್ರಾಮ ಪಂಚಾಯಿತಿಯಿಂದ ಆರೋಗ್ಯಕರ ನಿಧಿ ಅನದಾನದಿಂದ 1.90 ಲಕ್ಷ ರೂ. ವೆಚ್ಚದಲ್ಲಿ ಎಂಟು ಅಂಗನವಾಡಿಗಳಿಗೆ ಆರು ಬೀರು, ಎಂಟು ಕುಕ್ಕರ್, ಎಂಟು ಆಹಾರ ಪದಾರ್ಥ ತೂಕ ಮಾಡುವ ಯಂತ್ರ ಹಾಗೂ 44 ಚೇರ್‌ಗಳನ್ನು ನೀಡಲಾಗುವುದು. ಅಂಗನವಾಡಿ ಕಾರ್ಯಕರ್ತೆಯರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಕಾನೂರು ಗ್ರಾಪಂ ಅಧ್ಯಕ್ಷ ರತ್ನಾಕರ್ ಹೇಳಿದರು. ಕಾನೂರು ಗ್ರಾಪಂ ಆವರಣದಲ್ಲಿ 8 ಅಂಗನವಾಡಿಗಳಿಗೆ ವಿವಿಧ ಸಲಕರಣೆಗಳನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ವಿತರಿಸಿ ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷೆ ಮೋಹಿನಿ, ಸದಸ್ಯರಾದ ವಿಶಾಂತಿ ಡಿಸೋಜ, ವಿಜಯಕುಮಾರ್, ನಯನ, ನಾಗರತ್ನ, ಜಯಲಕ್ಷ್ಮಿ, ಸವಿತಾ, ಶಿವಕುಮಾರ್ ಭಟ್, ಪಿಡಿಒ ಶ್ರೀನಿವಾಸ್, ಕಾರ್ಯದರ್ಶಿ ಲೋಕೇಶ್ ಇದ್ದರು.