

ಸಿದ್ದಾಪುರ: ಶಿರಸಿಯ ಬೋರಕರ ಬಂಧುಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ತಾಲೂಕಿನ ಕಾನಗೋಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಶುಕ್ರವಾರ ಉಚಿತ ಪಠ್ಯ ಪುಸ್ತಕ, ಕಲಿಕೋಪಕರಣಗಳ ವಿತರಣೆ ಮತ್ತು ವನಮಹೋತ್ಸವ ಕಾರ್ಯಕ್ರಮ ಜರುಗಿತು.
ಎಸ್ಡಿಎಂಸಿ ಅಧ್ಯಕ್ಷ ನಾಗರಾಜ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಸಂಘದ ಅಧ್ಯಕ್ಷ ಸೀತಾರಾಮ ಕೋಥಾ ಬೋರಕರ ಕಾರ್ಯಕ್ರಮ ಉದ್ಘಾಟಿಸಿ ವನಮಹೋತ್ಸವದ ಅಂಗವಾಗಿ ಸಸಿ ನೆಟ್ಟರು. ಕಾರ್ಯದರ್ಶಿ ಕಮಲಾಕರ ಸೋಮು ಬೋರಕರ, ಶಾಲಾ ಮುಖ್ಯಾಧ್ಯಾಪಕ ನಾಗರಾಜಪ್ಪ ಎಚ್., ಪುರಂದರ ವಾಮನ ಬೋರಕರ, ವಿಜಯಕುಮಾರ ಖೇಮು ಬೋರಕರ, ಜನಾರ್ದನ ಲಕ್ಷ್ಮಣ ಬೋರಕರ, ಕುಮಾರ ಕೆರಿಯಾ ಬೋರಕರ, ಸುಭಾಸ ಖೇಮು ಬೋರಕರ, ಗೋಪಾಲಕೃಷ್ಣ ಕೋಥಾ ಬೋರಕರ, ಪೂಜಾ ಪ್ರಶಾಂತ ಬೋರಕರ, ಸತ್ಯನಾರಾಯಣ ದಾದು ಬೋರಕರ, ಮೂರ್ತಿ ಮೋಹನ ಬೋರಕರ, ಅರವಿಂದ ಕೆರಿಯಾ ಬೋರಕ, ಶ್ರೀರಂಗ ಮಾರುತಿ ಬೋರಕರ, ಮಾರುತಿ ನಾಗು ಬೋರಕರ, ಲಕ್ಷ್ಮಣ ದುರ್ಗ ಬೋರಕರ ಇತರರಿದ್ದರು.
ನಂತರ ವನಮಹೋತ್ಸವದ ಅಂಗವಾಗಿ ಶಾಲಾ ಆವರಣದಲ್ಲಿ ವಿವಿಧ ಜಾತಿಯ ಔಷಧ ಗಿಡ ಹಾಗೂ ಮತ್ತಿತರ ಗಿಡಗಳನ್ನು ನೆಡಲಾಯಿತು. ನಂದನ ಪಿ. ಬೋರಕರ ಕಾರ್ಯಕ್ರಮ ನಿರ್ವಹಿಸಿದರು.