ಬಡ ಕುಟುಂಬಗಳಿಗೆ ಉಚಿತ ಇ-ಸ್ವತ್ತು ವಿತರಣೆ

E-Khata Vithrane
ಹೊಸಕೋಟೆ ತಾಲೂಕಿನ ನಂದಗುಡಿಯ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 94ಸಿ ಅಡಿ ಮನೆ ಕಟ್ಟಿಕೊಂಡಿದ್ದ ಬಡ ಕುಟುಂಬಗಳಿಗೆ ಉಚಿತ ಇ-ಸ್ವತ್ತು ಖಾತೆ ವಿತರಿಸಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ಎನ್. ಧರ್ಮೇಶ್, ಗ್ರಾಪಂ ಅಧ್ಯಕ್ಷೆ ಮುನಿವೆಂಕಟಮ್ಮ ಬಚ್ಚಪ್ಪ, ಉಪಾಧ್ಯಕ್ಷೆ ಮಜರ್ ಉನ್ನಿಸಾ ಇದ್ದರು.
Published on

ವಿಜಯವಾಣಿ ಸುದ್ದಿಜಾಲ ನಂದಗುಡಿ
ಗ್ರಾಮಾಂತರ ಪ್ರದೇಶಗಳಲ್ಲಿ ನೂರಾರು ಬಡ ಕುಟುಂಬಗಳು ಹತ್ತಾರು ವರ್ಷಗಳಿಂದ ಸರ್ಕಾರಿ ಜಾಗಗಳಲ್ಲಿ 94ಸಿ ಅಡಿ ಹಕ್ಕು ಪತ್ರದಡಿ ಮನೆ ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ ಎಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಾಜಶೇಖರಗೌಡ ತಿಳಿಸಿದರು.
ನಂದಗುಡಿಯ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ 94ಸಿ ಅಡಿ ಮನೆ ಕಟ್ಟಿಕೊಂಡಿದ್ದ ಬಡ ಕುಟುಂಬಗಳಿಗೆ ಉಚಿತ ಇ-ಸ್ವತ್ತು ಖಾತೆ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಇ-ಸ್ವತ್ತು ಪಡೆಯಲು ಬಡವರು ಕೂಲಿ ಕೆಲಸ ಬಿಟ್ಟು, ಗ್ರಾಪಂ, ಕಂದಾಯ ಇಲಾಖೆಯ ಕಚೇರಿಗಳನ್ನು ಅಲೆಯುವ ಸ್ಥಿತಿ ನಿರ್ಮಾಣವಾಗಿತ್ತು. ಗ್ರಾಮೀಣ ಪ್ರದೇಶದ ಸರ್ಕಾರಿ ಜಾಗಗಳಲ್ಲಿ ಹಲವು ವರ್ಷಗಳಿಂದ ಮನೆ ಕಟ್ಟಿಕೊಂಡು ಖಾತೆ ಮಾಡಿಸಲಾಗದೇ ಪರಿತಪಿಸುತ್ತಿರುವವರಿಗೆ ಇ-ಸ್ವತ್ತು ನೀಡಲು ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದರು.
ಪಿಡಿಒ ಕೆಂಪಣ್ಣ ಮಾತನಾಡಿ, ನಂದಗುಡಿ ಗ್ರಾಪಂ ವ್ಯಾಪ್ತಿಯ 10 ಗ್ರಾಮಗಳಲ್ಲಿ ಬಡವರು ಮನೆ ಕಟ್ಟಿಕೊಂಡಿದ್ದು, ಸರ್ಕಾರಿ ಜಾಗದಲ್ಲಿ 94ಸಿ ಅಡಿ ಮನೆ ಕಟ್ಟಿಕೊಂಡಿರುವ ಕುಟುಂಬಗಳಿಗೆ ಉಚಿತವಾಗಿ ಇ-ಸ್ವತ್ತು ದಾಖಲೆಯನ್ನು ಒದಗಿಸಲಾಗಿದ್ದು, ಮುಂದಿನ ದಿನಗಳಲ್ಲಿ 94ಸಿ ಅಡಿ ಹಕ್ಕುಪತ್ರದಡಿ ಮನೆ ಕಟ್ಟಿರುವ ಬಡವರನ್ನು ಗುರುತಿಸಿ ಇ-ಸ್ವತ್ತು ಖಾತೆ ಮಾಡಿಕೊಡಲಾಗುವುದು ಎಂದರು.
94ಸಿ ಅಡಿ ಮನೆ ಕಟ್ಟಿಕೊಂಡಿರುವ 52 ಕುಟುಂಬಗಳಿಗೆ ಉಚಿತವಾಗಿ ಇ-ಸ್ವತ್ತು ಖಾತೆ ವಿತರಿಸಿದರು.
ಪಿಡಿಒ ಕೆಂಪಣ್ಣ, ಸದಸ್ಯರಾದ ವೀರರಾಜು, ಚಂದ್ರಪ್ಪ, ಮಂಜುಳಾ, ನಾಗೇಶ್, ಅನುರಾಧಾ ನಟರಾಜು, ಸುನಿತಾ ರಾಮೇಗೌಡ, ಶಾಂತಮ್ಮ ಹನುಮಂತಪ್ಪ, ನಾಗಮ್ಮ, ಶಿವರಾಜು, ಗಾಯಿತ್ರಿ ನಾಗೇಶ್, ಜಯರಾಮಯ್ಯ, ನಾರಾಯಣಸ್ವಾಮಿ, ಅಯೂಬ್ ಬೇಗ್, ಶಿವಕುಮಾರ್, ಲೆಕ್ಕಾಧಿಕಾರಿ ಸಂಪತ್ ಕುಮಾರ್, ಕಾರ್ಯದರ್ಶಿ ವೆಂಕಟೇಶ್, ಕರ ವಸೂಲಿಗಾರ ಮನೋಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net