ಗಿರಿಜನರ ಮಕ್ಕಳಿಗೆ ಚಾಲನಾ ಪರವಾನಗಿ ವಿತರಣೆ

Published on

ಹನಗೋಡು: ಹುಣಸೂರು ತಾಲೂಕಿನ ನೇರಳಕುಪ್ಪೆ ಗ್ರಾಪಂ ವ್ಯಾಪ್ತಿಯ ಗಿರಿಜನರ ಮಕ್ಕಳಿಗೆ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಮಂಗಳವಾರ ಚಾಲನಾ ಪರವಾನಗಿಗಳನ್ನು ವಿತರಿಸಿದರು.

ಇತ್ತೀಚೆಗೆ ಹಾಡಿಗಳಿಗೆ ಭೇಟಿ ನೀಡಿದ್ದ ವೇಳೆ ಅಲ್ಲಿನ 35ಕ್ಕೂ ಹೆಚ್ಚಿನ ಯುವಕರು ಕೊಡಗಿಗೆ ಕೂಲಿ ಕೆಲಸಕ್ಕೆ ಹಾಗೂ ಚಾಲಕರಾಗಿ ಹೋಗುತ್ತಿದ್ದರು. ಆದರೆ, ವಿದ್ಯೆ ಹಾಗೂ ಮೊದಲಾದ ದಾಖಲಾತಿ ಸಮಸ್ಯೆಯಿಂದಾಗಿ ವಾಹನ ಚಾಲನಾ ಪರವಾನಗಿ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದರು. ಚಾಲನಾ ಪರವಾನಗಿ ಮಾಡಿಸಿಕೊಡುವಂತೆ ಶಾಸಕರಲ್ಲಿ ಮನವಿ ಮಾಡಿದ್ದರು. ಯುವಕರ ಮನವಿ ಪುರಸ್ಕರಿಸಿದ ಶಾಸಕರು ಅದಕ್ಕೆ ತಗಲುವ ಸಂಪೂರ್ಣ ವೆಚ್ಚ ಭರಿಸಿ 35 ಯುವಕರಿಗೆ ಚಾಲನಾ ಪರವಾನಗಿ ವಿತರಿಸಿದರು.

ಈ ವೇಳೆ ಮಾತನಾಡಿದ ಶಾಸಕ ಎಚ್.ಪಿ.ಮಂಜುನಾಥ್, ಇತ್ತಿಚಿನ ದಿನಗಳಲ್ಲಿ ವಾಹನಗಳನ್ನು ಅತಿ ವೇಗದಲ್ಲಿ ಚಾಲನೆ ಮಾಡಿ ಅಪಘಾತಕ್ಕೊಳಗುತ್ತಿದ್ದು ಕಂಡುಬರುತ್ತಿದೆ. ನೀವು ಅತಿ ವೇಗವಾಗಿ ವಾಹನ ಚಾಲನೆ ಮಾಡದೆ ಜಾಗರೂಕತೆಯಿಂದ ವಾಹನ ಚಾಲನೆ ಮಾಡುವಂತೆ ಯುವಕರಿಗೆ ಸಲಹೆ ನೀಡಿದರು.

ಸಾಯಿ ಮಂದಿರ ಟ್ರಸ್ಟ್ ಅಧ್ಯಕ್ಷ ಎಚ್.ಎನ್.ಪ್ರೇಮ್‌ಕುಮಾರ್, ಪಂಚಮಿ ಕಂಪನಿ ನಿರ್ದೇಶಕರಾದ ಉದ್ಯಮಿ ಎಚ್.ಪಿ.ಅಮರ್ ನಾಥ್, ಜಿಲ್ಲಾ ಜಾಗೃತಿ ಹಾಗು ಉಸ್ತುವಾರಿ ಸಮಿತಿ ಸದಸ್ಯ ನೇರಳಕುಪ್ಪೆ ಮಹದೇವ್, ಜಿಲ್ಲಾ ಯುವ ಕಾಂಗ್ರೇಸ್ ಮಾಜಿ ಅಧ್ಯಕ್ಷ ಹಗರನಹಳ್ಳಿ ಕುಮಾರ್, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಲ್ಕುಣಿಕೆ ರಾಘು ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net