ಬಗರ್​ಹುಕುಂ ಭೂಮಿಗೆ ಸಾಗುವಳಿ ಪತ್ರ ವಿತರಿಸಿ

03 06 2025_BNG_RURAL_PAGE_5 pdf
ಬಗರ್​ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಆನೇಕಲ್​ ತಾಲೂಕು ಕಚೇರಿ ಮುಂದೆ ರೈತರು ಹಮ್ಮಿಕೊಂಡಿದ್ದ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಶಾಸಕ ಬಿ.ಶಿವಣ್ಣ ಮನವಿ ಸ್ವೀಕರಿಸಿದರು. ಬಮುಲ್​ ನಿರ್ದೇಶಕ ಆರ್​.ಕೆ.ರಮೇಶ್​, ಕಟ್ಟಡ ಕಾರ್ಮಿಕರ ಸಂದ ರಾಜ್ಯಾಧ್ಯಶಾಮಣ್ಣರೆಡ್ಡಿ. ಬಗರ್​ ಹುಕುಂ ಸಾಗುವಳಿದಾರರ ಹೋರಾಟ ಸಮಿತಿ ಮತ್ತು ಭೂ ಸ್ವಾಧಿನ ವಿರೋಧಿ ಹೋರಾಟಗಾರರ ಸಮಿತಿಯ ಗೋಪಾಲಪ್ಪ, ವೆಂಕಟೇಶ್​, ಸೋಮಶೇಖರ್​, ನಾರಾಯಣಪ್ಪ, ಜಗದೀಶ್​, ರವಿ, ವೆಂಕಟೇಶ್​ ಇದ್ದರು.
Published on

ಆನೇಕಲ್​ : ಬಗರ್​ಹುಕುಂ ಸಾಗುವಳಿದಾರರಿಗೆ ರಾಜ್ಯ ಸರ್ಕಾರ ಕೂಡಲೇ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿ ಬಗರ್​ಹುಕುಂ ಸಾಗುವಳಿದಾರರ ಹೋರಾಟ ಸಮಿತಿ ಮತ್ತು ಭೂ ಸ್ವಾಧಿನ ವಿರೋಧಿ ಹೋರಾಟಗಾರರ ಸಮಿತಿ ವತಿಯಿಂದ ರೈತರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ರೈತ ಮುಖಂಡ ಶಿವರಾಮರೆಡ್ಡಿ ಮಾತನಾಡಿ, ತಾಲೂಕಿನ ರೈತರು 40 ವರ್ಷಗಳಿಂದ ಜಮೀನಿನಲ್ಲಿ ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ, ಸರ್ಕಾರ 18 ಕಿ.ಮೀ ವ್ಯಾಪ್ತಿ ಒಳಗೆ ಇರುವ ಜಮೀನುಗಳಿಗೆ ಸಾಗುವಳಿ ಚೀಟಿ ನೀಡುವುದಕ್ಕೆ ಬರುವುದಿಲ್ಲ ಎಂದು ಹೇಳಿ ಸಮಿತಿಯು ಕೆಲ ರೈತರ ಜಮೀನುಗಳಿಗೆ ಈ ಹಿಂದೆ ಹಿಂಬರಹ ನೀಡಿರುತ್ತದೆ. ಅನೇಕ ರೈತರು ನ್ಯಾಯಾಲಯದ ಮೊರೆ ಹೋಗಿ ಆದೇಶ ಮಾಡಿಕೊಂಡು ಬಂದರೂ ಸಮಿತಿ ಸಾಗುವಳಿ ಚೀಟಿ ನೀಡಲು ತೀರ್ಮಾನ ಮಾಡುತ್ತಿಲ್ಲ. ಹಾಗಾಗಿ ಕಾಂಗ್ರೆಸ್​ ಸರ್ಕಾರ ಬಡ ರೈತರಿಗೆ ಸಾಗುವಳಿ ಚೀಟಿ ನೀಡಲು ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಪ್ರತಿಭಟನಾಕಾರರು ರಾಜ್ಯ ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧೂಷಣೆ ಕೂಗಿದರು. ಇನ್ನು ಸ್ಥಳಕ್ಕೆ ಆಗಮಿಸಿದ ಶಾಸಕ ಬಿ.ಶಿವಣ್ಣ ಮತ್ತು ತಹಸೀಲ್ದಾರ್​ ಶಶಿಧರ್​ ಮಾಡ್ಯಾಳ್​ ಪ್ರತಿಭಟನಾಕಾರರ ಮನವಿ ಸ್ವೀಕರಿಸಿದರು. ಬಗರ್​ ಹುಕುಂ ಸಾಗುವಳಿ ಸಮಿತಿ ಸದಸ್ಯರಾದ ಬಳ್ಳೂರು ನಾರಾಯಣಸ್ವಾಮಿ, ಕೂಗೂರು ಬಸವರಾಜು, ಚಿಕ್ಕತಾಯಮ್ಮ, ಎಡಗಮ್ಮ, ಹಳೆ ಚಂದಾಪುರ ಮಂಜುನಾಥ್​, ಮನಿರೆಡ್ಡಿ ಇದ್ದರು.

ಶಾಸಕರ ಭರವಸೆ : ಸಾಗುವಳಿ ಮಾಡುವ ರೈತರಿಗೆ ಯಾವುದೇ ತೊಂದರೆ ನೀಡುವುದಿಲ್ಲ. ಸರ್ಕಾರ ಬಿಬಿಎಂಪಿ ವ್ಯಾಪ್ತಿಯ 18 ಕಿ.ಮೀ. ವ್ಯಾಪ್ತಿಯ ಒಳಗೆ ಯಾವುದೇ ಜಮೀನುಗಳಿಗೆ ಸಾಗುವಳಿ ಚೀಟಿ ನೀಡಬಾರದು ಎಂಬ ಕಾನೂನು ಇರುವುದರಿಂದ ರೈತರಿಗೆ ಸಹಾಯ ಮಾಡಲು ಸಾಧ್ಯವಿಲ್ಲ. ಹಾಗಾಗಿ ರೈತರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಸರ್ಕಾರಕ್ಕೆ ಮನವಿ ಮಾಡಿ ಸಾಗುವಳಿ ಚೀಟಿ ನೀಡಲು ಕ್ರಮ ವಹಿಸಲಾಗುವುದು ಎಂದು ಶಾಸಕ ಬಿ.ಶಿವಣ್ಣ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net